ಬೆಂಗಳೂರು-ಸರ್ಕಾರದ ನಿಯಮದ ಪ್ರಕಾರ ಮಧ್ಯರಾತ್ರಿ 1 ಗಂಟೆಗೆ ಪಬ್ಗಳು ಕ್ಲೋಸ್ ಆಗಬೇಕು. ಆದರೆ, ಬೆಂಗಳೂರಿನಲ್ಲಿ ಸ್ಟಾರ್ ಹೀರೋ ಪಾರ್ಟಿ ನಡೆಸೋದಕ್ಕಾಗಿ ಮುಂಜಾನೆ 5ರವರೆಗೆ ಪಬ್ ಓಪನ್ ಇಡಲಾಗಿತ್ತು. ಇತ್ತೀಚೆಗೆ ರಿಲೀಸ್ ಆಗಿ ಸಕ್ಸಸ್ ಕಂಡ ಸಿನಿಮಾದ ಹೀರೋ ಹಾಗೂ ತಂಡದವರು ಈ ಪಾರ್ಟಿಯಲ್ಲಿದ್ದರು ಎನ್ನಲಾಗಿದೆ. ಸ್ಟಾರ್ ಹೀರೋ ಎನ್ನುವ ಕಾರಣಕ್ಕೆ ಪೊಲೀಸರು ಕಣ್ಮುಚ್ಚಿ ಕುಳಿತರಾ ಎನ್ನುವ ಪ್ರಶ್ನೆ ಮೂಡಿದೆ. ಈಗ ಪಬ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇತ್ತೀಚೆಗಷ್ಟೇ ಆ ಸ್ಟಾರ್ ನಟನ ಚಿತ್ರ ಬಿಡುಗಡೆಯಾಗಿತ್ತು. ಅದರ ಸಕ್ಸಸ್ ಸೆಲೆಬ್ರೇಷನ್ ಬಳಿಕ ಪಬ್ನಲ್ಲಿ ಸ್ಟಾರ್ಸ್ ಪಾರ್ಟಿಗೆ ಸೇರಿದ್ದರು. ಬೆಂಗಳೂರಿನ ಒರಾಯನ್ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್ನಲ್ಲಿ ಪಾರ್ಟಿ ನಡೆದಿತ್ತು. ನಟ, ನಿರ್ದೇಶಕ, ನಿರ್ಮಾಪಕ ಸೇರಿದಂತೆ ಹಲವು ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಜನವರಿ 3ರಂದು ರಾತ್ರಿ ಪಬ್ಗೆ ಸಿನಿಮಾ ತಂಡ ಆಗಮಿಸಿದ ಸಿಸಿಟಿವಿ ದೃಶ್ಯ ವೈರಲ್ ಆಗಿದೆ.ನಿಯಮಗಳ ಪ್ರಕಾರ ರಾತ್ರಿ 1 ಗಂಟೆಗೆ ಪಬ್ ಕ್ಲೋಸ್ ಆಗಬೇಕಿತ್ತು. ಒಂದು ಗಂಟೆ ಆಗುತ್ತಿದ್ದಂತೆ ಪಾರ್ಟಿ ಪೂರ್ಣಗೊಳಿಸಬೇಕಿತ್ತು. ಆದರೆ, ಮುಂಜಾನೆವರೆಗೂ ಪಾರ್ಟಿ ನಡೆದಿದೆ.