ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲೀನರ್ ಗಳಿಂದ ರೋಗಿ ಸಂಬಂಧಿಕರ ಮೇಲೆ ಹಲ್ಲೆ

ಭಾನುವಾರ, 13 ಆಗಸ್ಟ್ 2023 (15:30 IST)
ನಗರದ ವಿಕ್ಟೋರಿಯ ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಕ್ಲೀನರ್ ಗಳಿಂದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ.
ಕ್ಲಿನಿಂಗ್ ಸಿಬ್ಬಂದಿಯಿಂದ ರೋಗಿಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಲಾಗಿದೆ.ನಾಲ್ಕು ಜನ ಕ್ಲೀನಿಂಗ್ ಸಿಬ್ಬಂದಿಯಿಂದ ಮಹಿಳೆಯ ಎದೆಗೊದ್ದು ಆಸ್ಪತ್ರೆಯ ಆವರಣದಲ್ಲೇ ಹಲ್ಲೆ ನಡೆಸಿದ್ದು ,ಆಸ್ಪತ್ರೆಯ ಆವರಣದಲ್ಲಿ ಮಾರಾಮಾರಿ ನಡೆದಿದೆ.ಗೌರಿ ಎಂಬ ಮಹಿಳೆ ಮೇಲೆ ಆಸ್ಪತ್ರೆಗೆ ಕ್ಲೀನರ್ ಗಳಿಂದ ಹಲ್ಲೆ ನಡೆದಿದ್ದು,ಕಲಾಸಿಪಾಳ್ಯ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡೋದಾಗಿ ಮಹಿಳೆ ತಿಳಿಸಿದ್ದಾಳೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ