ಜನರನ್ನ ಗೊಂದಲಕ್ಕೆ ದೂಡಬಾರದು- ಯು.ಟಿ.ಖಾದರ್
ಕೊವಿಡ್ ವಿಚಾರದಲ್ಲಿ ಸರ್ಕಾರ ಗೊಂದಲ ಸೃಷ್ಟಿಸಬಾರದು. ಚೈನಾದಲ್ಲಿ ಏನಾಗಿದೆ ಅನ್ನೋದ್ರ ಸತ್ಯ ತಿಳಿದುಕೊಳ್ಳಬೇಕು ಅಂತಾ ಬೆಳಗಾವಿಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದನ್ನೇ ನಂಬಬಾರದು. ಭಯದ ವಾತಾವರಣದಲ್ಲಿ ಜನರನ್ನ ಗೊಂದಲಕ್ಕೆ ದೂಡಬಾರದು. ಚಳಿಗಾಲದಲ್ಲಿ ಕೊವಿಡ್ ಸೇರಿ ವೈರಸ್ ರೋಗ ಹೆಚ್ಚಾಗುತ್ತದೆ. ಸರ್ಕಾರ ಗೊಂದಲ ಹೆಚ್ಚಿಸದೇ ಸತ್ಯಾಸತ್ಯತೆ ತಿಳಿಸಿ ಅರಿವು ಮೂಡಿಸಬೇಕು. ಕೊವಿಡ್ ಅನ್ನು ರಾಜಕೀಯ ದೃಷ್ಟಿಯಲ್ಲಿ ನೋಡಬೇಡಿ. ನಮ್ಮ ಬಗ್ಗೆ ಕಾಳಿಜಿ ವಹಿಸಿದ್ದು ಖುಷಿ ಇದೆ. ಹಾಗೇ ಎಲ್ಲರ ಬಗ್ಗೆ ಕಾಳಜಿ ವಹಿಸಿ ಎಂದು ಯು.ಟಿ.ಖಾದರ್ ಸಲಹೆ ನೀಡಿದ್ರು.