ಸಾಮಾನ್ಯ ದಿನದಲ್ಲಿ 4 ಸಾವಿಎ ಟನ್ ತ್ಯಾಜ್ಯ ಉತ್ಪತ್ತಿಯಾಗ್ತಿತ್ತು.ಆದ್ರೆ ಇಂದು ಹಬ್ಬದ ಸಂಧರ್ಭದಲ್ಲಿ ಶೇ.20ರಿಂದ 30ರಷ್ಟು ಹೆಚ್ಚುವರಿ ತ್ಯಾಜ್ಯ ನಿರ್ಮಾಣವಾಗಿದೆ.ದಸರಾ ಹಬ್ಬದಲ್ಲಿ ವಾಹನಗಳಿಗೆ ಆಯುಧ ಪೂಜಾ, ಹೂವು ಮಾವಿನ ಸೊಪ್ಪು,ಮಾರಾಟ ಮಾಡುತ್ತಾರೆ.
ಹಬ್ಬ ಮುಗಿದ ಕೂಡಲೇ ವ್ಯಾಪಾರವಾಗದೇ ಉಳಿಯುವ ವಸ್ತು ರಸ್ತೆಯಲ್ಲಿ ಬಿಟ್ಟು ಹೋಗ್ತಾರೆ.ನಗರದ ಕೆ.ಆರ್ ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಕಪೌಂಡ್ ಬಳಿ, ಯಶವಂತಪುರ ರೈಲ್ವೆ ನಿಲ್ದಾಣ,ಗಾಂಧಿ ಬಜಾರ್, ಮಲ್ಲೇಶ್ವರಂ, ರಾಜಾಜಿನಗರ, ಜಯನಗರ, ಶಿವಾಜಿನಗರ ಕಸದ ರಾಶಿ ಬಿದ್ದಿದೆ.ಸದ್ಯ ಬಿಬಿಎಂಪಿ ಜಂಟಿ ಆಯುಕ್ತೆ ಪ್ರತಿಭಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.