ಖರ್ಗೆ-ಸಿಎಂ ಸಿದ್ದು ನಡುವಿನ ಮುನಿಸಿನ ಲಾಭ ಪಡೆಯಲು ಹೊರಟರಾ ಪ್ರಧಾನಿ ಮೋದಿ?

ಶುಕ್ರವಾರ, 4 ಮೇ 2018 (09:40 IST)
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪರ ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಪ್ರಧಾನಿ ಮೋದಿ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ವೈಮನಸ್ಯಕ್ಕೆ ಉಪ್ಪು ಸುರಿಯುವ ಕೆಲಸ ಮಾಡಿದ್ದಾರೆ.

ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಇವರಿಬ್ಬರ ನಡುವೆ ತೀವ್ರ ಅಸಮಾಧಾನವೆದ್ದಿತ್ತು ಎನ್ನಲಾಗಿತ್ತು. ಇದನ್ನೇ ಗುರಿಯಾಗಿಟ್ಟುಕೊಂಡು ಪ್ರಧಾನಿ ಮೋದಿ ಬಾಣ ಹೂಡಿದ್ದಾರೆ.

ಬೆಂಗಳೂರಿನಲ್ಲಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಖರ್ಗೆಯವರು ದಲಿತ ನಾಯಕರು. ಆದರೆ ಅವರಿಗೆ ಸಿಎಂ ಪಟ್ಟ ಸಿಗದಂತೆ ಮಾಡಲಾಯಿತು ಎಂದು ಸಿದ್ದುಗೆ ಟಾಂಗ್ ಕೊಟ್ಟಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆಗೆ ಯಾರೂ ಸಿಎಂ ಪಟ್ಟ ತಪ್ಪಿಸಲಿಲ್ಲ. ಅದರ ಬದಲಿಗೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನದ ಗೌರವ ನೀಡಲಾಯಿತು ಎಂದಿದ್ದಾರೆ.

ಆದರೆ ಈ ಬಾರಿ ರಾಜ್ಯ ಪ್ರವಾಸ ಮಾಡಿರುವ ಪ್ರಧಾನಿ ಮೋದಿ ಜೆಡಿಎಸ್ ನ ದೇವೇಗೌಡರನ್ನು ಹೊಗಳಿ ಅಚ್ಚರಿ ಮೂಡಿಸಿದಂತೆ, ಖರ್ಗೆಗೆ ಅನುಕಂಪ ಸೂಚಿಸಿ ಮತ್ತೊಂದು ಕಲ್ಲು ಹೊಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ