ಇಡಿ ಇಲಾಖೆಯನ್ನು ನಾವು ಕಂಟ್ರೋಲ್ ಮಾಡುತ್ತಿಲ್ಲ: ಪ್ರಧಾನಿ ಮೋದಿ ಸ್ಪಷ್ಟನೆ

Krishnaveni K

ಸೋಮವಾರ, 1 ಏಪ್ರಿಲ್ 2024 (09:45 IST)
ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ಇಲಾಖೆಗಳಂತಹ ಕೇಂದ್ರ ತನಿಖಾ ದಳಗಳನ್ನು ಕೇಂದ್ರ ಸರ್ಕಾರ ನಿಯಂತ್ರಿಸುತ್ತಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ವಿಪಕ್ಷ ನಾಯಕರ ಮೇಲೆ ನಡೆಯುತ್ತಿರುವ ಇಡಿ ದಾಳಿಗಳ ಹಿನ್ನಲೆಯಲ್ಲಿ ಕೇಂದ್ರ ತನಿಖಾ ದಳಗಳನ್ನು ಕೇಂದ್ರ ನಿಯಂತ್ರಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಬೇಕೆಂದೇ ವಿಪಕ್ಷ ನಾಯಕರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮೋದಿ ‘ನಾವು ಇಡಿ ಅಥವಾ ಕೇಂದ್ರ ತನಿಖಾ ದಳಗಳಿಗೆ ನಿರ್ದೇಶನ ನೀಡುವುದಿಲ್ಲ ಮತ್ತು ತಡೆ ಮಾಡುವುದೂ ಇಲ್ಲ. ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ನ್ಯಾಯಯುತವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.

ಅಷ್ಟೇ ಅಲ್ಲದೆ, ‘ಇಡಿ ಬಳಿ ಈಗ 7000 ಕೇಸ್ ಗಳಿವೆ. ಅದರಲ್ಲಿ ರಾಜಕಾರಣಿಗಳು ಒಳಗೊಂಡಂತೆ ಶೇ.3 ಕ್ಕಿಂತ ಕಡಿಮೆ ಕೇಸ್ ಗಳಿವೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಇಡಿ ಇಲಾಖೆ ಜಪ್ತಿ ಮಾಡಿದ್ದು ಕೇವಲ 35 ಲಕ್ಷ ಮಾತ್ರ. ನಾವು 2,200 ಕೋಟಿ ರೂ. ಸೀಝ್ ಮಾಡಿದ್ದೇವೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ