ಶತಮಾನದ ಮರಕ್ಕೆ ವಿಷ ಹಾಕಿದ ಕಿಡಿಗೇಡಿಗಳು!

ಗುರುವಾರ, 22 ಜುಲೈ 2021 (14:24 IST)
ರ್ಕಾರಿ ಜಾಗಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗ ಕಬಳಿಸಲು ನೂರಾರು ವರ್ಷದ ಬೃಹತ್ ಗಾತ್ರದ ಅರಳಿ ಮರವನ್ನು ಕೊಲ್ಲಲು ವಿಷ ಹಾಕಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ
ದೇವಾಲಯದ ಪಕ್ಕದಲ್ಲಿದ್ದ ಅಶ್ವಥ
ಕಟ್ಟೆ ಮೇಲಿದ್ದ ಬೃಹತ್ ಗಾತ್ರದ ಬೇವು ಹಾಗೂ ಅರಳಿ ಮರಗಳಿದ್ದ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆಗಳು ಸೃಷ್ಟಿಸಿ ಜಾಗ ಕಬಳಿಸಲು ಯತ್ನಿಸಿದ ಸಂಪಂಗಪ್ಪ ಕಳೆದ ತಿಂಗಳ ಹಿಂದೆ ಬೇವಿನ ಮರವನ್ನು ಕಟ್ ಮಾಡುವ ವೇಳೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದರು.ಇನ್ನು ಮರ ಕಡಿದ್ರೆ ಮತ್ತೆ ಗ್ರಾಮಸ್ಥರು ಅಡ್ಡಿಪಡಿಸುತ್ತಾರೆಂದು ಅಂದು ರಾತ್ರಿ ಸಂಪಂಗಪ್ಪನ ಕುಟುಂಬಸ್ಥರು ಅರಳಿ ಮರಕ್ಕೆ ರಂಧ್ರ ಕೊರೆದು ವಿಷ ಹಾಕಿದ್ದಾರೆಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ಇನ್ನು ಯಾವುದೇ ಕಾರಣಕ್ಕೂ ಈ ಜಾಗವನ್ನು ಸಂಪಂಗಪ್ಪನಿಗೆ ಬಿಟ್ಟು ಕೊಡಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಆ ಜಾಗದಲ್ಲಿ ನೂತನವಾಗಿ ನಾಗರಕಲ್ಲು ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಮತ್ತೆ ಗಿಡಗಳನ್ನು ನೆಟ್ಟಿದ್ದಾರೆ.
ಈ ಜಾಗ ದೇವಾಲಯಕ್ಕೆ ಸೇರಿದ್ದು ಆದಾ ಕಾರಣ ಗ್ರಾಮಸ್ಥರೆಲ್ಲ ಸೇರಿ ಅಶ್ವತಕಟ್ಟೆ ನಿರ್ಮಾಣ ಮಾಡಿದ್ದೇವೆ. ನಕಲಿ ದಾಖಲೆ ಸೃಷ್ಟಿಸಿ ದೇವಾಲಯಕ್ಕೆ ಸೇರಿದ ಸರ್ಕಾರಿ ಜಾಗವನ್ನು ಕಬಳಿಸಲು ಮುಂದಾಗಿರುವ ಹಾಗೂ ಮರಕ್ಕೆ ವಿಷ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳವಂತೆ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ. ಇನ್ನು ಮರಕ್ಕೆ ವಿಷ ಹಾಕಿದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ರರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ