16 ವರ್ಷಗಳ ಬಳಿಕ ಆರೋಪಿಯ ಬಂಧಿಸಿದ ಪೊಲೀಸರು
ಉತ್ತರ ಪ್ರದೇಶ ಮೂಲದ ಚಾಲಕ 16 ವರ್ಷಗಳ ಹಿಂದೆ ಅಪಘಾತ ಮಾಡಿ ಮೂವರ ಸಾವಿಗೆ ಕಾರಣವಾಗಿದ್ದ. ಅಂದು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ ಆರೋಪಿ ನಾಪತ್ತೆಯಾಗಿದ್ದ. ಈತನ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಹುಡುಕಾಡಿದ್ದರು.
ಇದೀಗ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.