ಯುವಕ ಟ್ರಾಫಿಕ್ ಎಎಸ್‌ಐ ಬಳಿ ನಾನು ತಪ್ಪು ಮಾಡಿದ್ರು ಫೈನ್ ಕಟ್ಟುವೆ ಅಂತ ಮನವಿ ಮಾಡಿಕೊಂಡರು ಎಎಸ್‌ಐ ಮಾತ್ರ ಕೆಟ್ಟ ಪದಗಳಿದ ಬೈಯುತ್ತಿರುವುದನ್ನು ಕಾಣಬಹುದಾಗಿದೆ. ಇದಲ್ಲದೇ ಯುವಕನ ಹೆಲ್ಮೆಟ್ ಕಿತ್ತುಕೊಂಡು ಆತನ ಮೇಲೆ ಹಲ್ಲೆ ಕೂಡ ಮಾಡಿದ್ದು, ಯುವಕನ ಮೇಲೆ ಎಎಸ್‌ಐ ನನಗೆ ಯಾಕ್ ಹೊಡೆಯೋಕ್ಕೆ ಬಂದೆ ಅಂತ ಪೋಲಿಸಪ್ಪ ಗದರುತ್ತಾನೆ. ಇದಲ್ಲದೇ ಸ್ಥಳದಲ್ಲಿದ್ದ ಪೋಲಿಸರು ಕೂಡ ಕಾನೂನು ಪ್ರಕಾರ ನಡೆದುಕೊಳ್ಳಲದೇ ಯುವಕನ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಇನ್ನೂ ಟ್ರಾಫಿಕ್ ಪೋಲಿಸರ ಈ ವರ್ತನೆಗೆ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದ್ದು, ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.