ಪೊಲೀಸ್ ಡ್ರೆಸ್ ನಲ್ಲಿ ಬಂದು 16 ಜನರಿಗೆ ಗುಂಡಿಕ್ಕಿ ಕೊಂದ

ಸೋಮವಾರ, 20 ಏಪ್ರಿಲ್ 2020 (15:28 IST)
ಪೊಲೀಸ್ ಡ್ರೆಸ್ ನಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳಾ ಪೊಲೀಸ್ ಪೇದೆ ಸೇರಿದಂತೆ 16 ಜನರನ್ನು ಗುಂಡಿಕ್ಕಿ ಸಾಮೂಹಿಕವಾಗಿ ಹತ್ಯೆ ಮಾಡಿದ್ದಾನೆ.

ಗನ್ ಮ್ಯಾನ್ ಆಗಿದ್ದ ವ್ಯಕ್ತಿಯೊಬ್ಬ ಪೊಲೀಸ್ ಡ್ರೆಸ್ ಹಾಕಿಕೊಂಡು ಬಂದು ಸಾಮೂಹಿಕವಾಗಿ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 16 ಜನರು ಸಾವನ್ನಪ್ಪಿದ್ದಾರೆ.

ಕೆನಡಾದ ನೋವಾ ಸ್ಕೋಟಿಯಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಇದು ಆ ದೇಶ ಕಂಡ ಬರ್ಬರ ಸಾಮುಹಿಕ ಹತ್ಯಾಕಾಂಡದ ಸಾಲಿಗೆ ಸೇರಿದೆ. 1989 ರಲ್ಲಿ ಗನ್ ಮ್ಯಾನ್ ವೊಬ್ಬ ಹಲವು ಮಹಿಳೆಯರನ್ನು ಗುಂಡಿಕ್ಕಿ ಕೊಂದಿದ್ದನು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ