ಮಕ್ಕಳ ಮುಂದೆಯೇ ಮೈದಾನದಲ್ಲಿ ರಾಸಲೀಲೆಗಿಳಿದ ಜೋಡಿ
ಈ ಕುರಿತು ಮಕ್ಕಳ ಪಾಲಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಎಷ್ಟು ಕರೆ ಮಾಡಿದರೂ ಪೊಲೀಸರು ಸ್ಥಳಕ್ಕೆ ಬರಲಿಲ್ಲವಂತೆ. ಕೊನೆಗೆ ಮಕ್ಕಳ ಪಾಲಕರೊಬ್ಬರು ದಂಪತಿ ಬಳಿ ಹೋಗಿ ಯುವಕನ ಕೆನ್ನೆಗೆ ಬಾರಿಸಿದ್ದಾರೆ. ಇದನ್ನು ಇನ್ನೊಬ್ಬ ಮಹಿಳೆ ವಿಡಿಯೋ ಮಾಡಿದ್ದಾಳೆ.
ಈ ಜೋಡಿಯು ರೌಂಡೆ ಪಾರ್ಕ್ ನಲ್ಲಿ ಯಾವ ನಾಚಿಕೆಯೂ ಇಲ್ಲದೇ ಕಾಮಕೇಳಿಯಲ್ಲಿ ತೊಡಗಿದ್ದರಂತೆ. ಈ ಕುರಿತು ಹೇಳಿರುವ ಮಹಿಳೆ ನಾನು ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದೇನೆ. ಈ ದಂಪತಿ ಎರಡನೇ ಬಾರಿ ಕಾಮಕೇಳಿಗಿಳಿದಿದ್ದಾರೆ. ಇಷ್ಟೆಲ್ಲಾ ವಿವರ ನೀಡಿದರೂ ಪೊಲೀಸ್ ಬಂದಿಲ್ಲವೆಂದು ಸಿಟ್ಟಾಗಿದ್ದಾರೆ. ಈ ಜೋಡಿಯ ಈ ಅವಾಂತರ ನೋಡಿ ಮಕ್ಕಳ ತಂದೆಯೊಬ್ಬ ಕೋಪಗೊಂಡು ಯುವಕನ ಕೆನ್ನೆಗೆ ಬಾರಿಸಿದ್ದಾನಂತೆ.