ಬೊಜ್ಜು ಕರಗಿಸಲು ಕಸರತ್ತಿನ ಮೊರೆ ಹೋದ ಪೊಲೀಸರು
ಡೊಳ್ಳು ಹೊಟ್ಟೆ ಹೊತ್ತ ಪೊಲೀಸರು ಸ್ವತಃ ಇಲಾಖೆಯ ಹಿರಿಯ ಅಧಿಕಾರಿಗಳ ಅಸಮಧಾನಕ್ಕೆ ಕಾರಣವಾಗಿದ್ದರು. ಹೀಗಾಗಿ ಡೊಳ್ಳು ಹೊಟ್ಟೆಯ ಪೊಲೀಸರ ಕೊಬ್ಬು ಕರಗಿಸಲು ಹಿರಿಯ ಅಧಿಕಾರಿ ಮಾಸ್ಟರ್ ಪ್ಲಾನ್ ಜಾರಿಮಾಡಿದ್ರು. ಹೀಗಾಗಿ ದಪ್ಪಗಿದ್ದ ಪೊಲೀಸರ ತೂಕ ಈಗ ಕರಗಲಾರಂಭಿಸಿದೆ. ಇದು ಪೊಲೀಸರಲ್ಲಿ ಸಹಜವಾಗಿ ಸಂತಸಕ್ಕೆ ಕಾರಣವಾಗಿದೆ.
ಬೆಳಗ್ಗೆ ಹಾಗೂ ಸಂಜೆ ಒಟ್ಟು ನಾಲ್ಕು ಗಂಟೆಗಳ ಕಾಲ ದಪ್ಪಗಿರುವ ಪೊಲೀಸ್ ಸಿಬ್ಬಂದಿಗೆ ಯೋಗ, ಧ್ಯಾನ, ಪ್ರಾಣಾಯಾಮ, ಓಟ, ವೇಗದ ನಡಿಗೆ ತರಬೇತಿ ನಡೆಯುತ್ತಿದೆ. ಇದರಿಂದ ಪೊಲೀಸರು ಸ್ಲಿಮ್ ಆಗುತ್ತಿದ್ದಾರೆ.