ನಾನು ಶಾಸಕ ಎಂದ್ರೂ ಒಳಗೆ ಬಿಡಲಿಲ್ಲ -ಶಾಸಕ ಎಂ ಪಿ ಕುಮಾರಸ್ವಾಮಿ

ಶನಿವಾರ, 29 ಜನವರಿ 2022 (18:44 IST)

ವಿಧಾನಸೌಧ ಪ್ರವೇಶ ಮಾಡುವಾಗಲೂ ಹೀಗೆ ಆಗಿತ್ತು. ಶಾಸಕರು ಎಂದರೆ ಹೀಗೆ ಇರಬೇಕು ಎಂದು ಪೊಲೀಸರು ಭಾವಿಸಿರಬೇಕು. ವಿಧಾನಸೌಧ, ಶಾಸಕರ ಭವನಕ್ಕೆ ಬರುವ ಶಾಸಕರ ಹಿಂದೆ ಹತ್ತಾರು ಜನ ಇರಬೇಕು, ಮೈ ತುಂಬಾ ಬಂಗಾರ ಇರಬೇಕೆಂದು ಅವರು ಭಾವಿಸಿರಬಹುದು ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಶಾಸಕರ ಭವನಕ್ಕೆ ಬಂದಾಗ ಪೊಲೀಸರು‌ ಹೊಯ್ಸಳ ವಾಹನದಲ್ಲಿ ಗೇಟ್ ಗೆ ಅಡ್ಡವಾಗಿ ನಿಂತಿದ್ದರು. ನಾನು ಎಂಎಲ್‌ಎ. ಶಾಸ ಕರ ಭವನದ ರೂಂಗೆ ಹೋಗಬೇಕು ಎಂದರೂ ಬಿಡಲಿಲ್ಲ. ನನ್ನ ಕಾರಿಗೆ ಎಂಎಲ್‌ಎ ಪಾಸ್ ಇದ್ದರೂ ಉದ್ದಟತನ ಮಾಡಿದರು. ಹೀಗಾಗಿ ನಾನೇ ಕೆಳಗಿಳಿದು ಮಾತನಾಡಿದೆ. ಆದರೆ ಕಪಾಳಕ್ಕೆ ಹೊಡೆದಿಲ್ಲ. ನಂತರ ಆತ ಮೇಲಾಧಿಕಾರಿಗೆ ಕರೆ ಮಾಡಿ ವಿವರಣೆ ನೀಡಿದ. ಅವ ರು ಬಂದ ನಂತರ ಪ್ರಕರಣ ತಿಳಿ ಆಗಿದೆ. ಬಹುಶಃ ಆತ ಕುಡಿದಿರಬೇಕು. ಅದಕ್ಕೆ ಈ ರೀತಿ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ