ಮುಟ್ಟಿನ ವೇಳೆ ಮಹಿಳೆಯರು ಎಷ್ಟು ಗಂಟೆಗೊಮ್ಮೆ ಪ್ಯಾಡ್ ಬದಲಿಸಿದರೆ ಉತ್ತಮ ಗೊತ್ತಾ…?

ಭಾನುವಾರ, 22 ಜುಲೈ 2018 (07:28 IST)
ಬೆಂಗಳೂರು : ಮಹಿಳೆಯರು ಮುಟ್ಟಿನ ಸಮಯದಲ್ಲಿ ಪ್ಯಾಡಗಳನ್ನು ಬಳಸುತ್ತಾರೆ. ಆದರೆ ಇದರಿಂದ ಅವರಿಗೆ ಕೆಲವೊಮ್ಮೆ ಸೋಂಕು ತಗಲುವ ಸಂಭವವಿರುತ್ತದೆ. ಇದಕ್ಕೆ ಕಾರಣ ಅವರು ಧರಿಸಿರುವ ಪ್ಯಾಡ್ ಗಳನ್ನು ಎಷ್ಟು ಗಂಟೆಗೊಮ್ಮೆ ಬದಲಿಸಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲದಿರುವುದು.


ಹೌದು, ಪ್ರತಿಯೊಬ್ಬ ಮಹಿಳೆಯು ಮುಟ್ಟಿನ ವೇಳೆ ಬಳಸುವ ಪ್ಯಾಡ್ ಗಳನ್ನು ಪ್ರತಿ 3,4 ಗಂಟೆಗಳಿಗೊಮ್ಮೆ ಬದಲಿಸಿಕೊಳ್ಳಬೇಕು. ಅತಿ ಹೆಚ್ಚು ರಕ್ತಸ್ರಾವವನ್ನು ಎದುರಿಸುವ ಮಹಿಳೆಯರು ಪ್ರತಿ 2ಗಂಟೆಗಳಿಗೊಮ್ಮೆ ಬದಲಿಸಿದರೆ ಉತ್ತಮ.
ಹೀಗೆ ಮಾಡುವ ಮೂಲಕ ಮಾತ್ರವೇ ಸೂಕ್ಷ್ಮವಾದ ಈ ಪ್ರದೇಶವನ್ನು ಕೀಟಾಣುರಹಿತವಾಗಿಸಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಬಹುದು.


ಅಲ್ಲದೇ, ಪ್ಯಾಡ್ ನಲ್ಲಿ ಸಂಗ್ರಹವಾದ ರಕ್ತ ಕೊಂಚ ಹೊತ್ತಿಗೇ ವಾಸನೆ ಹೊಡೆಯಲು ಪ್ರಾರಂಭಿಸುತ್ತದೆ, ಇದು ಸ್ವಾಭಾವಿಕ. ಈ ವಾಸನೆಯಿಂದ ಪ್ಯಾಡ್ ಗಳ ಒಳಗೆ ಅತಿ ಸೂಕ್ಷ್ಮಜೀವಿಗಳು ಅತಿ ಹೆಚ್ಚಾಗಿ ವೃದ್ಧಿಗೊಂಡಿರುತ್ತವೆ. ಪ್ಯಾಡ್ ನಲ್ಲಿರುವ ತೇವಾಂಶ ಹಾಗೂ ಬೆಚ್ಚಗಿನ ತಾಪಮಾನ ಬ್ಯಾಕ್ಟೀರಿಯಾಗಳು ಬೆಳೆಯಲು ಸೂಕ್ತವಾಗಿವೆ. ಹಾಗಾಗಿ ಪ್ಯಾಡನ್ನು ಅವಧಿ ಮುಗಿದಾಕ್ಷಣ ಬದಲಿಸಿಕೊಳ್ಳಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ