ಪೊಂಗುರಿ ಸಂಚಿಕೆ; ಬರಹ ಆಹ್ವಾನ

ಶನಿವಾರ, 5 ಫೆಬ್ರವರಿ 2022 (21:14 IST)
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ತ್ರೈಮಾಸಿಕ ಪೊಂಗುರಿ ಸಂಚಿಕೆಯನ್ನು ಸಾಹಿತಿ ಕಲಾವಿದರಿಗೆ ಅವಕಾಶ ಕಲ್ಪಸುವ ಸಲುವಾಗಿ ಪ್ರಕಟಿಸುತ್ತಿದೆ. 
ಈಗಗಲೇ ನಾಲ್ಕು ಸಂಚಿಕೆ ಬಿಡುಗಡೆಯಾಗಿದೆ, ಆದ್ದರಿಂದ ಎಲ್ಲಿಯೂ ಪ್ರಕಟವಾಗದ ತಮ್ಮ ಸ್ವಂತ ರಚನೆಯ ಕೊಡವ ಭಾಷೆಯಲ್ಲಿ ರಚಿಸಿದ ಕಥೆ, ಕವನ, ಚುಟುಕ, ವೈಚಾರಿಕ ಲೇಖನ, ನಗೆಹನಿ, ಪ್ರಬಂಧ, ಸಂಶೋಧನಾ ಲೇಖನಗಳನ್ನು ನುಡಿ ಫಾಂಟ್‍ನಲ್ಲಿ ಟೈಪ್ ಮಾಡಿ ಅಥವಾ ಕೈ ಬರಹದಲ್ಲಿ ಅಚ್ಚುಕಟ್ಟಾಗಿ ಬರೆದು ಮಾರ್ಚ್ 15 ರೊಳಗೆ ಅಧ್ಯಕ್ಷರು/ ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ ಈ ಕಚೇರಿಗೆ ತಲುಪಿಸಲು ಕೋರಲಾಗಿದೆ. 
ಅರ್ಹವಾದುದ್ದನ್ನು ಮುಂದಿನ ಪೊಂಗುರಿ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಬರಹಗಾರರು ಬರೆದು ಕಳುಹಿಸುವಾಗ ಹೆಸರು ಮತ್ತು ಪೂರ್ಣ ವಿಳಾಸ ನಮೂದಿಸಬೇಕು ಮತ್ತು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಬ್ಯಾಂಕ್ ಖಾತೆಯ ವಿವರವುಳ್ಳ ಪಾಸ್‍ಬುಕ್ ಪ್ರತಿ ನೀಡಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ಸಂಖ್ಯೆ 08272-229074 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ,ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ