ಹೈಟೇಕ್ ಸಿಟಿಗಾಗಿ ಬಿಬಿಎಂಪಿ ಗೆ 100 ದಿನ ಟಾರ್ಗೆಟ್

ಗುರುವಾರ, 20 ಜುಲೈ 2023 (20:39 IST)
ಡಿಸಿಎಂ ಡಿ ಕೆ ಶಿವಕುಮಾರ್  ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ 100 ದಿನಗಳ  ಟಾರ್ಗೆಟ್ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಬಿಎಂಪಿ ಫುಲ್ ಅಲರ್ಟ್ ಆಗಿದ್ದು, ಸಿಲಿಕಾನ್ ಸಿಟಿಯ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ಪ್ಲಾನ್ ಮಾಡಿದೆ. ತ್ಯಾಜ್ಯ ನಿರ್ವಹಣೆ ಮತ್ತು ಫುಟ್‌ಪಾತ್ ದುರಸ್ತಿಯ ಬಗ್ಗೆ ಯೋಜನೆ ರೂಪಿಸಿದೆ. 

ರಾಜಧಾನಿಯಲ್ಲಿನ ಬ್ಲಾಕ್‌ಸ್ಪಾಟ್‌ಗಳ ಸರಿಪಡಿಸುವ ಕೆಲಸವನ್ನು ಪಾಲಿಕೆ ಮಾಡಲಿದೆ. ಇದಕ್ಕಾಗಿ ಮಾರ್ಷಲ್‌ಗಳನ್ನು ನಿಯೋಜಿಸಲು ಪ್ಲಾನ್ ಮಾಡಿದೆ. ಫುಟ್ ಪಾತ್ ಮೇಲಿನ ಅತಿಕ್ರಮಣವನ್ನೂ ತೆರವುಗೊಳಿಸಲು ರೆಡಿಯಾಗಿದೆ. ಇನ್ನು ಕಳೆದ ಎರಡು ವಾರದಿಂದ ಹೆಚ್ಚಿನ ಪ್ರಮಾಣ ಕಂದಾಯ ವಸೂಲಿ ಬಗ್ಗೆ ಗಮನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳಿಗೆ ವಾರ ಮತ್ತು ತಿಂಗಳ ಆಧಾರದಲ್ಲಿ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿ ನೀಡಲಾಗಿದೆ. ನಿಗದಿತ ಗುರಿ ಸಾಧನೆ ಮಾಡದ ಅಧಿಕಾರಿಗಳನ್ನು ಬೇರೆ ವಲಯಗಳಿಗೆ ಮತ್ತು ನಾನ್ ಅಕ್ಸಿಕ್ಯೂಟಿವ್ ಹುದ್ದೆಗೆ ವರ್ಗಾವಣೆ ಮಾಡಲು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ