ಕೆಪಿಸಿಸಿ ಪದಗ್ರಹಣ ಮುಂದೂಡಿಕೆ : ಬಿಜೆಪಿ ವಿರುದ್ಧ ಡಿಕೆಶಿ ಪರೋಕ್ಷ ವಾಗ್ದಾಳಿ
ಕೆಪಿಸಿಸಿ ನೂತನ ಪದಾಧಿಕಾರಿಗಳ ಸಮಾರಂಭ ಜೂನ್ 7 ಕ್ಕೆ ನಿಗದಿಯಾಗಿತ್ತು. ಆದರೆ ಮತ್ತೆ ಮುಂದೂಡಿಕೆ ಆಗಿರೋದಕ್ಕೆ ಡಿಕೆಶಿ ಅಸಮಧಾನ ಹೊರಹಾಕಿದ್ದಾರೆ.
ಕಾಂಗ್ರೆಸ್ ನ ಹಿರಿಯ ನಾಯಕರ ಸಮ್ಮುಖದಲ್ಲಿ ಸಭೆಗೆ ವಿಶೇಷವಾಗಿ ಸಿದ್ಧತೆ ನಡೆಸಲಾಗುತ್ತಿತ್ತು. ಕೆಪಿಸಿಸಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಪ್ರತಿಜ್ಞಾ ಎಂದು ಹೆಸರು ಇಡಲಾಗಿತ್ತು ಎಂದಿದ್ದಾರೆ.
ಶೀಘ್ರವೇ ಪ್ರತಿಜ್ಞಾ ಸಮಾರಂಭದ ಮುಂದಿನ ದಿನಾಂಕ ಪ್ರಕಟ ಮಾಡುವುದುದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.