ಹಾಸನ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣರನ್ನು ಎಸ್ಐಟಿ ತಂಡ ಸ್ಥಳ ಮಹಜರು ನಡೆಸಲು ಹೊಳೆನರಸೀಪುರದ ಮನೆಗೆ ಕರೆದುಕೊಂಡು ಬಂದಿತ್ತು.
ಈ ವೇಳೆ ಪ್ರಜ್ವಲ್ ಕ್ಯಾಮರಾ ಕಣ್ಣಿನಿಂದ ಆದಷ್ಟು ತಮ್ಮನ್ನು ತಾವು ಮರೆ ಮಾಚುವ ಪ್ರಯತ್ನ ಮಾಡಿದ್ದಾರೆ. ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಪ್ರಜ್ವಲ್ ನನ್ನು ಕರೆದುಕೊಂಡು ಬಂದು ಇಲ್ಲಿ ಇಂಚಿಂಚೂ ಬಿಡದೇ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಪ್ರಜ್ವಲ್ ನನ್ನು ನೋಡಲು ಅವರ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಅಲ್ಲದೆ, ಮಾಧ್ಯಮಗಳೂ ಸೇರಿದ್ದವು. ಈ ವೇಳೆ ಪ್ರಜ್ವಲ್ ಬೆಂಬಲಿಗರು ಪ್ರಜ್ವಲ್ ಪರವಾಗಿ ಘೋಷಣೆಗಳನ್ನು ಕೂಗಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
ಜೊತೆಗೆ ಮಾಧ್ಯಮಗಳು ತಮ್ಮ ಮೇಲೆ ಫೋಕಸ್ ಮಾಡುತ್ತಿವೆ ಎಂದಾದಾಗ ಪ್ರಜ್ವಲ್ ಪೊಲೀಸ್ ವಾಹನದ ಸೀಟ್ ನಲ್ಲಿ ಮಲಗಿ ಕ್ಯಾಮರಾ ಕಣ್ಣು ತಮ್ಮ ಬೀಳದಂತೆ ತಡೆಹಿಡಿದಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್ ಎಸ್ ಐಟಿ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆ.
ಇಂದು ಸಂಜೆ 7.15 ಕ್ಕೆ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಇನ್ನೊಂದೆಡೆ ರಾತ್ರಿ 8 ಗಂಟೆಗೆ ನ್ಯೂಯಾರ್ಕ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ರೋಚಕ ಪಂದ್ಯ ನಡೆಯಲಿದೆ.