ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಈಗ ಎಸ್ಐಟಿ ಕಚೇರಿಯಲ್ಲಿ ನೀಡಿರುವ ಟಾಯ್ಲೆಟ್ ಬಗ್ಗೆ ಅಸಮಾಧಾನವಾಗಿದೆಯಂತೆ.
ಪ್ರಜ್ವಲ್ ರೇವಣ್ಣರನ್ನು ಮೊನ್ನೆ ತಡರಾತ್ರಿ ಬೆಂಗಳೂರಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು ನೇರವಾಗಿ ತಮ್ಮ ಕಚೇರಿಗೆ ಕರೆದೊಯ್ದಿದ್ದರು. ರಾತ್ರಿ ಅಲ್ಲಿ ತಂಗಿದ್ದ ಪ್ರಜ್ವಲ್ ಮಧ್ಯಾಹ್ನ ಮೆಡಿಕಲ್ ಚೆಕ್ ಅಪ್ ಮುಗಿಸಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು.
ಈ ವೇಳೆ ನಿಯಮದಂತೆ ನ್ಯಾಯಾಧೀಶರು ಪ್ರಜ್ವಲ್ ಗೆ ನಿಮಗೆ ಅಧಿಕಾರಿಗಳು ಕಿರುಕುಳ ನೀಡಿದ್ದಾರೆಯೇ ಎಂದು ಕೇಳಿದ್ದಾರೆ. ಆಗ ಪ್ರಜ್ವಲ್ ಕಿರುಕುಳ ಏನೂ ಕೊಟ್ಟಿಲ್ಲ, ಆದರೆ ಅವರು ಕೊಟ್ಟಿರುವ ಕೊಠಡಿಯ ಟಾಯ್ಲೆಟ್ ಗಬ್ಬು ವಾಸನೆ ಬರುತ್ತಿದೆ ಎಂದಿದ್ದಾರೆ.
ಇದಕ್ಕೆ ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕಿದ್ದಾರೆ. ಬಳಿಕ ನ್ಯಾಯಾಧೀಶರು ಎಲ್ಲರನ್ನೂ ಸುಮ್ಮನಿರುವಂತೆ ಸೂಚಿಸಿದ್ದಾರೆ . ಸದಾ ಐಷಾರಾಮಿ ಜೀವನದಲ್ಲೇ ಬೆಳೆದ ಪ್ರಜ್ವಲ್ ಗೆ ಈಗ ಎಸ್ಐಟಿ ವಶದಲ್ಲಿ ಹೊಂದಿಕೊಳ್ಳಲೂ ಕಷ್ಟವಾಗುತ್ತಿದೆ.