ವಾಲ್ಮೀಕಿ ನಿಗಮ ಹಗರಣದಲ್ಲಿ ಇ ತುಕರಾಂ, ವಕ್ಫ್ ಆಸ್ತಿ ಕಬಳಿಕೆಯಲ್ಲಿ ಕಾಂಗ್ರೆಸ್ ನಾಯಕರೇ ಭಾಗೀದಾರ: ಪ್ರಲ್ಹಾದ್ ಜೋಶಿ

Krishnaveni K

ಶುಕ್ರವಾರ, 8 ನವೆಂಬರ್ 2024 (12:27 IST)
ಬಳ್ಳಾರಿ: ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅನ್ನಪೂರ್ಣ ತುಕರಾಂ ಪತಿ ಸಂಸದ ಇ ತುಕರಾಂ ಬಗ್ಗೆ ಬಿಜೆಪಿ ಇಂದು ಪೋಸ್ಟರ್ ಹಿಡಿದು ವಾಗ್ದಾಳಿ ನಡೆಸಿದೆ.

ವಾಲ್ಮೀಕಿ ಹಗರಣದಲ್ಲಿ ಇ ತುಕರಾಂ ಕೂಡಾ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ‘ಇ ತುಕರಾಂ ಏನಿದ್ದಾರಲ್ಲ ಅವರು ವಾಲ್ಮೀಕಿ ನಿಗಮ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಆ ಅಕ್ರಮದಲ್ಲಿ ಅವರಿಗೂ ಹಣ ಹೋಗಿದೆ’ ಎಂದು ಜೋಶಿ ಹೇಳಿದ್ದಾರೆ.

ಇನ್ನು, ವಕ್ಫ್ ಆಸ್ತಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರೇ ಆಸ್ತಿ ಹೊಡೆದಿದ್ದಾರೆ ಎಂದು ಜೋಶಿ ಆರೋಪ ಮಾಡಿದ್ದಾರೆ. ಈ ಸರ್ಕಾರ ತುಷ್ಠೀಕರಣದ ಪರಾಕಾಷ್ಟೆಯನ್ನು ತಲುಪಿದ್ದಾರೆ. ನಮ್ಮ ಬಗ್ಗೆ ಆರೋಪ ಮಾಡುತ್ತೀರಲ್ಲಾ? ನಮ್ಮ ಸರ್ಕಾರವಿದ್ದಾಗ ಯಾವುದೇ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಒತ್ತುವರಿ ಮಾಡಲು ಸೂಚಿಸಿದ್ದೆವಾ? ಎಂಥಾ ನಾನ್ ಸೆನ್ಸ್ ಮಾಡುತ್ತಿದ್ದೀರಿ?’ ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.

ಹಿಂದೂಗಳು ಜಾಗೃತರಾಗುತ್ತಾರೆ ಎಂದಾಗ ನೋಟಿಸ್ ವಾಪಸ್ ಪಡೆಯುವ ನಾಟಕ ಮಾಡಿದ್ರು ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಜಮೀರ್ ಅಹ್ಮದ್ ಅವರೇ ಹೇಳಿದ್ದಾರೆ, ಸಿಎಂ ಸಿದ್ದರಾಮಯ್ಯ ಆದೇಶದ ಮೇರೆಗೇ ನಾವು ಒತ್ತುವರಿ ಮಾಡುತ್ತಿದ್ದೇವೆ ಎಂದು. ಮುಡಾ ಹಗರಣದಲ್ಲಿ ಸ್ವತಃ ಹೈಕೋರ್ಟ್ ಹೇಳಿದೆ. ನಿಮ್ಮ ಪ್ರಭಾವವಿಲ್ಲದೇ ಅಕ್ರಮವಾಗಲು ಸಾಧ್ಯವಿಲ್ಲ ಎಂದಿದೆ. ಅಂದ ಮೇಲೆ ಸುಳ್ಳು ಕೇಸ್ ಹಾಕಿದೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡುತ್ತೀರಿ ಎಂದು. ಇದು ನಾವು ಹೇಳಿರೋದು ಅಲ್ಲ. ನಮ್ಮ ಮೇಲೆ ಸಿಬಿಐ, ಇಡಿ ಛೂ ಬಿಡುತ್ತೀರಿ ಎನ್ನುತ್ತೀರಿ. ಈ ಪ್ರಕರಣದಲ್ಲಿ ಸಿಬಿಐ ಎಲ್ಲಿ ಬಂತು? ಇಡಿ ಬಂದಿರೋದು ಮುಡಾದಲ್ಲಿ ಅಕ್ರಮ ಹಣ ವರ್ಗಾವಣೆ ವಿಚಾರಣೆ ಮಾಡಲು ಬಂದಿದೆ. ಆ ಇಡಿ ಬಂದಿರುವುದು ಹೈಕೋರ್ಟ್ ತೀರ್ಪು ಬಂದ ಮೇಲೆ’ ಎಂದು ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ