ಕೋವಿಡ್ ಬಗ್ಗೆ ಗರ್ಭಿಣಿ ಸ್ತ್ರೀಯರು ಆತಂಕಪಾಡುವ ಅಗತ್ಯವಿಲ್ಲ-ಡಾ.ಪರಿಮಳ

ಶನಿವಾರ, 23 ಡಿಸೆಂಬರ್ 2023 (16:02 IST)
ಕೋವಿಡ್ ಆತಂಕ ಹೆಚ್ಚಳ ಹಿನ್ನೆಲೆ ಗರ್ಭಿಣಿ ಮಹಿಳೆಯರಿಗೆ ಗರ್ಭಿಣಿ, ಸ್ತ್ರೀ ರೋಗ ತಜ್ಞೆ ಕಿವಿಮಾತು ನೀಡಿದ್ದಾರೆ.ಡಾ.ಪರಿಮಳಾ ದೇವಿ ಅವರು ಕೆಲ ಸಜೆಷನ್ ಕೋವಿಡ್ ಬಗ್ಗೆ ಕೊಟ್ಟಿದ್ದಾರೆ.

ಯಾರು ಭಯ ಪಡುವ ಅವಶ್ಯಕತೆ ಇಲ್ಲ.ಈಗಾಗಲೇ ಮಹಾಮಾರಿ ಬಂದು ಹೋದ ಕಾರಣ ವ್ಯಾಕ್ಸಿನ್ ಎಲ್ಲಾರು ಪಡೆದ ಕಾರಣ,ಈ ಕೋರೊನಾ ಎದುರಿಸುವ ಶಕ್ತಿ ನಮಗಿದೆ.ಗರ್ಭಿಣಿ ಮಹಿಳೆಯರು ಮಾಸ್ಕ್ ಹಾಕಿ ಓಡಾಡೋದು ಕಡ್ಡಾಯ.ರೋಗ ನಿರೋಧಕ ಹೆಚ್ಚಿಸುವ ಆಹಾರ ತಿನ್ನಲು ಸೂಚನೆ ನೀಡಲಾಗಿದೆ.ಹೊರಗಡೆ ಹೋಗಿ ಬಂದು ಮನೆಯಲ್ಲಿ ಕೈ ತೊಳೆಯಲು ಸೂಚನೆ ನೀಡಿದೆ.
 
ಗುಂಪಿನ ಸ್ಥಳಗಳಿಗೆ ತೆರಳುವಾಗ ಆದಷ್ಟು ಹೆಚ್ಚಾಗಿ ಒಂಟಿಯಾಗಿರಬೇಕು.ಗರ್ಭಿಣಿ ಮಹಿಳೆಯರು jN1 ಭಯಪಡಬೇಕಿಲ್ಲ.ಇದು ಒಂದು ವೇಳೆ ಬಂದ್ರು ಎರಡು ದಿವಸದಲ್ಲಿ ಗುಣಪಡಿಸಬಹುದು ಆದಷ್ಟು ಸ್ವಚ್ಛತೆ ಕಡೆ ಗಮನ ಕೊಡುವಂತೆ ಡಾ.ಪರಿಮಳಾ ದೇವಿ ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ