ಸಿದ್ದು ಸಂಪುಟ ಸಚಿವರಿಗೆ ಸರ್ಕಾರದಿಂದ ಕಾರ್ ಗಳ ಸಿದ್ಧತೆ

ಶುಕ್ರವಾರ, 19 ಮೇ 2023 (16:32 IST)
ಕೆಕೆ ಗೆಸ್ಟ್ ಹೌಸ್ ಬಳಿ ನೂತನ ಸಚಿವರುಗಳಿಗೆ  ಕಾರ್ ಗಳು ಸಿದ್ದವಾಗಿದೆ.ಕೆಕೆ ಗೆಸ್ಟ್ ಹೌಸ್ ನ ಬೇಸಮೆಟ್ ಪಾರ್ಕಿಂಗ್ ನಲ್ಲಿ ಕಾರ್ ಗಳಿದ್ದು.ಹಿಂದಿನ ಸರ್ಕಾರದಲ್ಲಿ ಇದ್ದಂತ ಕಾರಗಳನ್ನೇ ನೂತನ ಸಚಿವರಿಗೆ ಹಂಚಿಕೆ ಮಾಡಲಾಗಿದೆ.
 
ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕಾರ್ ವಿತರಣೆ ಮಾಡಲಾಗುತ್ತೆ.ಪ್ರಮಾಣ ವಚನ ಸ್ವೀಕರಿಸುವ ಸಚಿವರಿಗೆ ಮಾತ್ರ ಕಾರ್ ವಿತರಣೆ ಮಾಡಲಾಗುತ್ತೆ.ಕಡಿಮೆ ಬಂದಲ್ಲಿ ಮಾತ್ರ ಹೊಸ ಕಾರ್ ಖರೀದಿಗೆ ಅನೋಮೋದನೆ ನೀಡಲಾಗುತ್ತೆ.ಇಲ್ಲವಾದಲ್ಲಿ ನೂತನ ಸಚಿವರಿಗೆ ಹಳೆ ಕಾರ್ ಗಳೇ ಮುಂದುವರಿಕೆಯಾಗಲಿದೆ.ಈಗಾಗಲೇ ಕಾರ್ ನಂಬರ್ ಗಳನ್ನು  ಸಿದ್ದರಾಮಯ್ಯ ಸಂಪುಟ ಸಚಿವರು ರಿಜಿಸ್ಟಾರ್ ಮಾಡಿಕೊಂಡಿದ್ದಾರೆ.ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ಕಾರ್ ನಂಬರ್ ನ್ನ ಸಿದ್ದರಾಮಯ್ಯ ಸಂಪುಟ ಸಚಿವರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.ಇಂದು ಸಂಜೆ ಎಲ್ಲಾ ಕಾರ್ ಗಳನ್ನು ಸ್ವಚ್ಛಗೊಳಿಸಿದ ಬಳಿಕ ನೂತನ ಸಚಿವರಿಗೆ ವಿತರಣೆ ಮಾಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ