ಮುಷ್ಕರ ನಡೆಸಲು ನಿರ್ಧರಿಸಿದ ಸಾರಿಗೆ ನೌಕರರು

ಶನಿವಾರ, 18 ಮಾರ್ಚ್ 2023 (14:03 IST)
ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಚಂದ್ರಶೇಕರ್ ನೇತೃತ್ವದಲ್ಲಿ  ಸುದ್ದಿಗೋಷ್ಠಿ ನಡೆಸಲಾಗಿದೆ.ಸರ್ಕಾರದ 15% ವೇತನ ಪರಿಪ್ಕರಣೆ ವಿರುದ್ಧ ಸಾರಿಗೆ ನೌಕರರು ಆಕ್ರೊಶ ಹೊರಹಾಕಿದ್ದು,ಅಲ್ಲದೇ ಅಂದಿನ ಸಾರಿಗೆ ಸಚಿವರು ನಮಗೆ ಭರವಸೆ ಕೊಟ್ಟಿದ್ದರು.ಸಾರಿಗೆ ನೌಕರರಿಗೆ‌ ಮೋಸ ಮಾಡೊ ಉದ್ದೇಶದಿಂದ ಭರವಸೆ ಕೊಟ್ಟಿದ್ರಾ?ಕೆಪಿಟಿಸಿಎಲ್ ಮತ್ತು ಸರ್ಕಾರಿ‌ ನೌಕರರಿಗೆ ಬೇಡಿಕೆ ಈಡೇರಿಸಲಾಗಿದೆ.ನಮ್ಮ ಮೇಲೆ ಮಲತಾಯಿ ಧೋರಣೆ ನಡೆಯುತ್ತಿದೆ.ಭರವಸೆ ಈಡೇರಿಸದೇ ಇದ್ರೆ 24ರಂದು ಮುಷ್ಕರ ಮಾಡ್ತೇವೆ.ಮೂಲ ವೇತನಕ್ಕೆ ಬಿಡಿಎ ಯನ್ನು ಸೇರಿಸಬೇಕು.ಸರಿಸಮಾನವಾಗಿ ನಮಗೆ ವೇತನ ಕೊಡಬೇಕು.ಸಾರಿಗೆ ನೌಕರರೆಲ್ಲ ಒಗ್ಗಾಟ್ಟಾಗಿದ್ದೇವೆ.
 
ಸಂಘಟನೆಗಳಲ್ಲಿ ವಿಷಯಾಧಾರಿತ ಭಿನ್ನಾಭಿಪ್ರಾಯವಿದೆ .ಸ್ಟ್ರೈಕ್ ಗೆ  15 ದಿನ ಮೊದಲು ನಾವು ಮನವಿ ಕೊಟ್ಟಿದ್ದೇವೆ .ರಾತುರಿಯಲ್ಲಿ  ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ಕೊಟ್ಟಿದೆ. ಸಮಾನ ಮನಸ್ಕರ ವೇದಿಕೆಯ ಬೆಂಬಲ ಬೇಕಾದರೆ
ಅವರು ನಮ್ಮ‌ ಬೇಡಿಕೆ ಸೇರಿಸಬೇಕು.ಬೇಷರತ್ ಬೆಂಬಲ ನೀಡಿ ಎಂದು ಜಂಟಿ ಕ್ರಿಯಾ ಸಮಿತಿ ನಮಗೆ ಹೇಳಿದೆ .ನಾವು ನಮ್ನ ಬೇಡಿಕೆ ಸೇರಿಸದೇ ಇದಲ್ಲಿ ಬೆಂಬಲಿಸಲ್ಲ .ಜಂಟಿಕ್ರಿಯಾ ಸಮೀತಿಯವರು ಕಾರ್ಮಿಕಾ ಚುನಾವಣೆ ಬೇಡ‌ ಅಂತಿದ್ದಾರೆ.ಪರೊಕ್ಷವಾಗಿ ಅನಂತ ಸುಬ್ಬುರಾವ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ನಮ್ಮ‌ ಬೆಂಬಲ ವಿಲ್ಲದೇ 21ದರ ಮುಷ್ಕರ ಯಶಸ್ಸಾಗಲ್ಲ.ಕಳೆದ ಪ್ರತಿಭಟನೆಯಲ್ಲಿ ವಜಾ ಗೊಂಡ ನೌಕರಿಗೆ ಮರುನೇಮಕವಾಗಬೇಕು ಎಂದು ಸಾರಿಗೆ ನೌಕರರು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ