ಶ್ರೀ ಶ್ರೀ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ಗುದರೋಗಗಳ (ಪ್ರೊಕ್ಟಾಲಜಿ) ಚಿಕಿತ್ಸಾ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಜೀವನ ಶೈಲಿಯಿಂದ ಅನೇಕ ಹೊಸ ಹೊಸ ರೋಗಗಳು ಬರುತ್ತಿದ್ದು, ಅವುಗಳ ಚಿಕಿತ್ಸೆಗೆ ಆಯುರ್ವೇದದಲ್ಲಿ ಸಂಶೋಧನೆ ನಡೆಸುವುದು ಅಗತ್ಯವಿದೆ ಎಂದು ಹೇಳಿದರು.
ಎರಡು ದಿನಗಳ ವಿಶೇಷ ಕಾರ್ಯಾಗಾರದಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು ೨೦ ಕ್ಕೂ ಹೆಚ್ಚು ಆಯುರ್ವೇದ ಮತ್ತ ಅಲೋಪತಿ ಶಸ್ತ್ರ ಚಿಕಿತ್ಸಕರು ತರಬೇತಿ ನೀಡಿದ್ದು, ಸುಮಾರು ಐವತ್ತಕ್ಕೂ ಹೆಚ್ಚು ಆಯುರ್ವೇದ ಶಸ್ತ್ರ ಚಿಕಿತ್ಸಕರು ಕಾರ್ಯಾಗಾರದಲ್ಲಿ ತರಬೇತಿ ಪಡೆದರು.
ಕಾರ್ಯಾಗಾರದಲ್ಲಿ ಹಿರಿಯ ಆಯುರ್ವೇದ ಚಿಕಿತ್ಸೆ ತಜ್ಞರಾದ ಡಾ ಮನೋರಂಜನ್ ಸಾಹು, ಡಾ. ರವಿಶಂಕರ ಪೆರ್ವಾಜೆ, ಡಾ.ಕ್ಷೀರಸಾಗರ್, ಶಲ್ಯ ತಂತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ರಮೇಶ್ ಭಟ್ ಪಾಲ್ಗೊಂಡಿದ್ದರು.