ಕ್ಯಾನ್ಸರ್ ತಡೆಯುವಲ್ಲಿ ಕಿಮೋಥೆರಪಿಯಷ್ಟೇ ಪರಿಣಾಮಕಾರಿ ಔಷಧ ಯಾವುದು ಗೊತ್ತಾ...?
ಶನಿವಾರ, 24 ಫೆಬ್ರವರಿ 2018 (07:09 IST)
ಬೆಂಗಳೂರು : ಪ್ರಾಚೀನ ಕಾಲದ ಸಾಂಬಾರ ಪದಾರ್ಥಗಳನ್ನು ಆಹಾರದಲ್ಲಿ ಬಳಕೆ ಮಾಡುವುದರಿಂದ ಅನೇಕ ರೀತಿಯಾದ ರೋಗಗಳನ್ನು ತಡೆಯಬಹುದಾಗಿದೆ. ಅದರಂತೆ ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಕ್ಯಾನ್ಸರ್ ಎಂಬ ಮಹಾಮಾರಿಗೆ ಶುಂಠಿಯು ಅತ್ಯಂತ ಪರಿಣಾಮಕಾರಿ ಔಷಧ ಎನ್ನುವ ವಿಚಾರವೊಂದು ಬೆಳಕಿಗೆ ಬಂದಿದೆ.
ಶುಂಠಿ ಕ್ಯಾನ್ಸರ್ ಕಾರಕ ಸೆಲ್’ಗಳನ್ನು ಕೊಲ್ಲುವಲ್ಲಿ ಕಿಮೋಥೆರಪಿಗಿಂತ 10,000 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಅಧ್ಯಯನವೊಂದು ಹೇಳಿದೆ.ಶುಂಠಿಯಲ್ಲಿರುವ ಶೋಗೋಲ್ ಎನ್ನುವ ಅಂಶವೊಂದು ಕ್ಯಾನ್ಸರ್’ಗೆ ವಿಷಕಾರಿಯಾಗಿರುತ್ತದೆ. ಆದ್ದರಿಂದ ಕ್ಯಾನ್ಸರ್ ಕೋಶಗಳು ಹರಡದಂತೆ ತಡೆಯಲು ಸಹಕಾರಿಯಾಗುತ್ತದೆ. ಆರೋಗ್ಯಕರ ಜೀವಕೋಶಗಳಿಗೆ ಯಾವುದೇ ರೀತಿಯಾದ ಹಾನಿ ಮಾಡದೇ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಕೊಲ್ಲುತ್ತದೆ. ಪ್ರಮುಖವಾಗಿ ಸ್ತನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ವೃಷಣ, ಲಿವರ್ ಕ್ಯಾನ್ಸರ್, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ತಡೆಯಲು ಶುಂಠಿ ಹೆಚ್ಚು ಪರಿಣಾಮಕಾರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ