ನಗರದಲ್ಲಿ ಮಳೆ ಕೊರತೆಯಿಂದ ತರಕಾರಿ ದರ ಗಗನಕ್ಕೇರಿದೆ. ಬೀನ್ಸ್, ಕ್ಯಾರೆಟ್ ದರ 100 ರೂಪಾಯಿ ದಾಟ್ಟಿದೆ.ಮಳೆಯ ಕೊರತೆಯಿಂದಾಗಿ ತರಕಾರಿ ಮತ್ತು ಸೊಪ್ಪಿನ ಬೆಲೆ ಕೂಡ ದುಪ್ಪಟ್ಟಾಗಿದೆ.
ಇತ್ತೀಚಿಗೆ ಸುರಿದ ಮಳೆಯಿಂದ ತರಕಾರಿಗಳು ಕೊಳೆತು ನಾಶವಾಗಿರುವ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದೆ.ನಗರದ ಮಾರುಕಟ್ಟೆಗಳಲ್ಲಿ ಗಣನೀಯವಾಗಿ ತರಕಾರಿಗಳ ಬೆಲೆ ಏರಿಕೆಯಾಗಿದೆ.
ತರಕಾರಿ ಈ ವಾರದ ಬೆಲೆ ಕಳೆದ ವಾರದ ಬೆಲೆ ನೋಡುವುದಾದ್ರೆ..
ಬೀನ್ಸ್ 100 60
ಬಟಾಣಿ 150 80
ಕ್ಯಾರೆಟ್ 80 60
ಕ್ಯಾಪ್ಸಿಕಮ್ 60 40
ಮೆಣಸಿನಕಾಯಿ 80 60
ಹಿರೇಕಾಯಿ 60 50
ಬೆಂಡೆಕಾಯಿ 40 30
ಆಲೂಗಡ್ಡೆ 30. 20
ಟೊಮೆಟೊ 50 20
ಈರುಳ್ಳಿ 40 20
ಸೋರೆಕಾಯಿ 50 30
ನುಗ್ಗೆಕಾಯಿ 100 80
ಪಡವಲಕಾಯಿ 80 70
ನುಗ್ಗೆಕಾಯಿ 100 80
ಬದನೆಕಾಯಿ 60 40
ಹಾಗಲಕಾಯಿ 60 40
ತೊಂಡೆಕಾಯಿ 60 50
ಬಿಟ್ ರೂಟ್ 40 30
ಕುಂಬಳಕಾಯಿ 60 40
ಕ್ಯಾಬೇಜ್ 40 25
ಶುಂಠಿ 200 120
ಬೆಳ್ಳುಳ್ಳಿ 140 70
ಮೂಲಂಗಿ 80 40
ಬ್ರೋಕೋಲಿ 200 80
ನವಿಲು ಕೋಸು 70 35
ಕೊತ್ತಂಬರಿಸೊಪ್ಪು 50 20
ಹೀಗೆ ತರಕಾರಿದರಲ್ಲಿ ಮುಂದಿನ 2 ತಿಂಗಳ ಕಾಲ ಇದೇ ದರ ಮುಂದುವರೆಯುವ ಸಾಧ್ಯತೆ ಇದೆ.ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ ಮಾರುಕಟ್ಟೆ ಜೊತೆಗೆ ಅಷ್ಟೇ ಅಲ್ಲ ಹಾಪ್‌ಕಾಮ್ಸ್ ನಲ್ಲೂ ತರಕಾರಿ ಬೆಲೆ ಏರಿಕೆಯಾಗಿದೆ.