ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಖಾಸಗಿ ಶಿಕ್ಷಕರ ಪ್ರತಿಭಟನೆ

ಬುಧವಾರ, 16 ಡಿಸೆಂಬರ್ 2020 (12:55 IST)
ಬೆಂಗಳೂರು : ಸಾರಿಗೆ ನೌಕರರ ಪ್ರತಿಭಟನೆಯ ಬಳಿಕ ಇದೀಗ ಖಾಸಗಿ ಶಾಲಾ ಶಿಕ್ಷಕರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊರೊನಾ ವೇಳೆ ಶಿಕ್ಷಕರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಮೌರ್ಯ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ನಡೆಸುತ್ತಿದ್ದಾರೆ. ಅನುದಾನ ರಹಿತ ಶಾಲಾಶಿಕ್ಷಕರು, ಖಾಸಗಿ ಪ್ರಾಥಮಿಕ-ಪ್ರೌಢಶಾಲೆಗಳ ಒಕ್ಕೂಟ ತಟ್ಟೆ ಬಡಿದು , ತರಕಾರಿ ಮಾರುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಶಾಲೆಗಳಿಗೆ ವಿಶೇಷ ಅನುದಾನ, ವೇತನ ಹೆಚ್ಚಳ, ಪ್ರತ್ಯೇಕ ವಿಮೆ , ಕೊರೊನಾ ವಾರಿಯರ್ಸ್ ಪಟ್ಟ ಹಲವು ಬೇಡಿಕೆಗಳನ್ನು ಮುಂದಿಟ್ಟು  ಶಿಕ್ಷಕರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ