ಬಾಯಿಗೆ ಬಂದ ಹಾಗೆ ಮಾತನಾಡಲು ಇದು ಆರ್ ಎಸ್ಎಸ್ ಕಚೇರಿಯಲ್ಲ: ಪ್ರಿಯಾಂಕ್ ಖರ್ಗೆ

Krishnaveni K

ಸೋಮವಾರ, 17 ಮಾರ್ಚ್ 2025 (19:51 IST)
ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಇಂದು ಅಂಬೇಡ್ಕರ್ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸಿದರು. ಈ ವೇಳೆ ಪ್ರಿಯಾಂಕ್ ಖರ್ಗೆ ಬಾಯಿಗೆ ಬಂದ ಹಾಗೆ ಮಾತನಾಡಲು ಇದು ಆರ್ ಎಸ್ಎಸ್ ಕಚೇರಿಯಲ್ಲ ಎಂದರು.

ಅಂಬೇಡ್ಕರ್ ರನ್ನು ಸೋಲಿಸಿದ್ದು, ಅವರ ಸಮಾಧಿಗೆ ಜಾಗ ಕೊಡದೇ ಅವಮಾನಿಸಿದ್ದು ಕಾಂಗ್ರೆಸ್ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರಿಯಾಂಕ್ ಖರ್ಗೆ ಅಂಬೇಡ್ಕರ್ ರನ್ನು ಸೋಲಿಸಿದ್ದು ಸಾವರ್ಕರ್. ಇದಕ್ಕೆ ದಾಖಲೆಯಿದೆ ಎಂದರು.

ಸ್ವತಃ ಅಂಬೇಡ್ಕರ್ ಪತ್ರದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಬೇಕಿದ್ದರೆ ನಿಮಗೆ ದಾಖಲೆ ಕೊಡುತ್ತೇನೆ ಎಂದ ಪ್ರಿಯಾಂಕ್ ಖರ್ಗೆ ಅಂಬೇಡ್ಕರ್ ಬರೆದ ಪತ್ರ ಓದಿದರು. ಈ ವೇಳೆ ಎರಡೂ ಪಕ್ಷಗಳ ಸದಸ್ಯರ ನಡುವೆ ತೀವ್ರ ಗದ್ದಲವೇರ್ಪಟ್ಟಿದೆ.

ಆಗ ಕೆರಳಿದ ಪ್ರಿಯಾಂಕ್ ಖರ್ಗೆ ‘ಇದು ಸದನ. ಏನಂದುಕೊಂಡಿದ್ದೀರಾ, ನಿಮಗೆ ಬಾಯಿಗೆ ಬಂದ ಹಾಗೆ ಮಾತನಾಡಲು ಇದು ಆರ್ ಎಸ್ಎಸ್ ಕಚೇರಿಯಲ್ಲ. ನಿಮ್ಮಂತಹ ಆರ್ ಎಸ್ಎಸ್ ಜನರನ್ನು ಸಾಕಷ್ಟು ನೋಡಿದ್ದೇನೆ. ನಿಮಗೆಷ್ಟು ಅಧಿಕಾರ ಇದ್ಯೋ ನಮಗೂ ಅಷ್ಟೇ ಇದೆ’ ಎಂದು ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ