ಗ್ಯಾರಂಟಿ ಸಮಿತಿಗೆ 5, 6 ಕೋಟಿ ಖರ್ಚು ಮಾಡಿದ್ರೆ ತಪ್ಪಾ ಎಂದ ರೇವಣ್ಣ: ನಿಮ್ಮ ಸ್ವಂತ ಹಣ ಕೊಡಿ ಎಂದ ನೆಟ್ಟಿಗರು
ಬಿಜೆಪಿಯವರಿಗೆ ಬೇರೆ ಏನೂ ವಿಷಯ ಇಲ್ಲ. ಭಾವನಾತ್ಮಕ ವಿಷಯವನ್ನೇ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಜನರ ಬದುಕನ್ನು ನೋಡುತ್ತೇವೆ. ನಮ್ಮ ಎಲ್ಲಾ ಯೋಜನೆಗಳೂ ಸಮಾಜದ ಕಟ್ಟಕಡೆಯ ಜನರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಮಾಡುತ್ತೇವೆ.
ಇದಕ್ಕೆ ಜನ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದು ಕೊಡಬೇಕೆಂದರೆ ನಿಮ್ಮ ಹಣದಲ್ಲೇ ಕೊಡಿ. ನಮ್ಮ ತೆರಿಗೆ ಹಣದಲ್ಲಿ ಯಾಕೆ ಕೊಡುತ್ತೀರಿ? ಬರೀ 5,6 ಕೋಟಿ ಎಂದು ಎಷ್ಟು ಸುಲಭವಾಗಿ ಹೇಳುತ್ತೀರಿ, ಅದೇನು ಸಣ್ಣ ಮೊತ್ತವಾ ಎಂದು ಪ್ರಶ್ನೆ ಮಾಡಿದ್ದಾರೆ.