ನೈತಿಕತೆ ಎಲ್ಲಾ ನಮಗೆ ಮಾತ್ರ ಇರಬೇಕಾ: ಪ್ರಿಯಾಂಕ್ ಖರ್ಗೆ

Krishnaveni K

ಬುಧವಾರ, 28 ಆಗಸ್ಟ್ 2024 (16:10 IST)
Photo Credit: Facebook
ಬೆಂಗಳೂರು: ನೈತಿಕತೆ ಎನ್ನುವುದು ಕೇವಲ ಕಾಂಗ್ರೆಸ್ ನವರಿಗೆ ಮಾತ್ರನಾ? ಬಿಜೆಪಿವಯರಿಗೆ ಇರಬಾರದಾ, ನಮಗೆ ಮಾತ್ರ ಇರಬೇಕಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಸಿಎ ಕೋಟಾದಡಿ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್ ಗೆ ನಿವೇಶನ ಮಂಜೂರು ಮಾಡಿರುವುದರ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದು, ಪ್ರಿಯಾಂಕ್ ರಾಜೀನಾಮೆಗೆ ಒತ್ತಾಯಿಸಿದೆ. ಖರ್ಗೆ ಕುಟುಂಬಕ್ಕಾಗಿ ನಿಯಮಾವಳಿಯನ್ನೇ ಬದಲಾಯಿಸಿ 5 ಎಕರೆ ಜಮೀನು ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ದಲಿತ ಎಂಬ ಹೆಸರಿನಲ್ಲಿ ಸರ್ಕಾರದ ಪ್ರಭಾವ ಬಳಸಿಕೊಂಡು ಖರ್ಗೆ ಕುಟುಂಬ ಜಮೀನು ಪಡೆದುಕೊಂಡಿದೆ. ಹೀಗಾಗಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ ನಾನ್ಯಾಕೆ ರಾಜೀನಾಮೆ ಕೊಡಲಿ, ನಾನೇನೂ ತಪ್ಪು ಮಾಡಿಲ್ಲ ಎಂದಿದ್ದಾರೆ.

ಬಿಜೆಪಿಯವರ ಮೇಲೂ ಹಲವು ಕೇಸ್ ಗಳಿವೆ. ಬಿಎಸ್ ಯಡಿಯೂರಪ್ಪನವರ ವಿರುದ್ಧವೂ ಕೇಸ್ ಇಲ್ವಾ? ಅವರಿಗೆ ನೈತಿಕತೆ ಅಪ್ಲೈ ಆಗಲ್ವಾ? ಮೊದಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಪ್ರಿಯಾಂಕ್ ಖರ್ಗೆ ತಮ್ಮ ವಿರುದ್ಧ ಹೋರಾಡುತ್ತಿರುವ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ