ಅಣ್ಣ ಜತೆ ಪ್ರಿಯಾಂಕಾ ಸ್ನೋಮೊಬೈಲ್ಸ್ ಸವಾರಿ
ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸ್ನೋಮೊಬೈಲ್ ನಲ್ಲಿ ಸವಾರಿ ಮಾಡುತ್ತಿರುವುದು ವಿಡಿಯೊ ಎಲ್ಲ ಕಡೆ ವೈರಲ್ ಆಗಿದೆ. ಈ ಬಗ್ಗೆ ಶ್ರೀನಿವಾಸ ಬಿವಿ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಸ್ನೋಮೊಬೈಲ್ ಸ್ಕೀಯರ್‌ನಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸವಾರಿ ಮಾಡುವುದನ್ನು ಮತ್ತು ಅವರ ಸುತ್ತ ಜನರು ಇರುವುದುನ್ನು ಕಾಣಬಹುದು, ಜನಪ್ರಿಯ ಪ್ರವಾಸಿ ತಾಣದಲ್ಲಿ ಇವರಿಬ್ಬರು ಹಿಮದಲ್ಲಿ ಸ್ನೋಮೊಬೈಲ್ ಸವಾರಿ ಮಾಡುವ ಮೂಲಕ ಸಂತೋಷದ ಕ್ಷಣ ಕಳೆದಿದ್ದಾರೆ.