ಪಂಚಾಯತ್ ಮುಂದೆ ಗ್ರಾಮಸ್ಥರಿಂದ ಪ್ರತಿಭಟನೆ

ಮಂಗಳವಾರ, 30 ಅಕ್ಟೋಬರ್ 2018 (18:35 IST)
ಪಟ್ಟಣ ಪಂಚಾಯತಿ ರದ್ದುಗೊಳಿಸಲು ಆಗ್ರಹಿಸಿ ಗ್ರಾಮ ಪಂಚಾಯತಿಯನ್ನಾಗಿ  ಮಾಡಬೇಕು ಎಂದು ಒತ್ತಾಯಿಸಿ ನಾಗರಿಕರು ಪ್ರತಿಭಟನೆ ನಡೆಸಿದರು.

ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿಯಲ್ಲಿ ನಾಗರಿಕರಿಂದ  ಪ್ರತಿಭಟನೆ ನಡೆಯಿತು. ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಶಾಸಕ ಮಹಾಂತೇಶ ದೊಡಗೌಡರ ಅವರಿಗೆ ಮನವಿ  ನಿವಾಸಿಗಳು ಮುಂದಾದರು.

2015 ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ  ಪಂಚಾಯತ್ ಆಗಿ ಮೇಲ್ದರ್ಜೆಗೇರಿರುವ ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯತ್  14ಸದಸ್ಯರನ್ನು ಹೊಂದಿದೆ. ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ್ದರಿಂದ ಮನೆ, ಖುಲ್ಲಾ ಜಾಗೆ, ನೀರು, ವಿದ್ಯುತ್,  ತೆರಿಗೆ ಹೆಚ್ವಾಗುತ್ತಿದೆ. ತೆರಿಗೆ ಭರಿಸಲು ಜನಸಾಮಾನ್ಯರರಿಂದ ಆಗುತ್ತಿಲ್ಲ‌.

ಹೀಗಾಗಿ ಪಟ್ಟಣ ಪಂಚಾಯತ್ ಬದಲು ಗ್ರಾಮ ಪಂಚಾಯತಿನ್ನಾಗಿ ಮುಂದುವರೆಸಲು ಗ್ರಾಮಸ್ಥರ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ