ಅಮಾಯಕ ರೈತನಿಗೆ PSI ಹುದ್ದೆ ಕೊಡಿಸುತ್ತೇನೆ ಅಂತಾ ಹೇಳಿ ಕಾಂಗ್ರೆಸ್ ಮುಖಂಡನಿಂದ 40 ಲಕ್ಷ ಹಣ ದೋಖಾ ಮಾಡಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರೈತ ವಿಠ್ಠಲ್ ಪಕೀರಪ್ಪ ಪುತ್ರ ಸಚಿನ್‌ಗೆ ಕೆಲಸ ಕೊಡಿಸೋದಾಗಿ ಕಾಂಗ್ರೆಸ್ ಮುಖಂಡ ಸೈಯದ್ ಜಾವೀದ್ ಭರವಸೆ ನೀಡಿದ್ದು, ಅಮಾಯಕ ರೈತನಿಂದ 40 ಲಕ್ಷ ಹಣ ಪಡೆದು ಎಸ್ಕೇಪ್ ಆಗಿದ್ದಾನೆ. PSI ಹುದ್ದೆ ಕೊಡಿಸೋದಾಗಿ ರೈತ ಪಕೀರಪ್ಪನಿಂದ ಹಂತ ಹಂತವಾಗಿ 40 ಲಕ್ಷ ಪಡೆದುಕೊಂಡಿದ್ದಾರೆ.. ಮೊದಲಿಗೆ ಕಾನ್ಸ್‌ಟೇಬಲ್ ಹುದ್ದೆ ಕೊಡಿಸೋದಾಗಿ ಹೇಳಿ 6 ಲಕ್ಷ ಪಡೆದಿದ್ದ ಸೈಯದ್, ಆ ನಂತರ PSI ಹುದ್ದೆ ಕೊಡಿಸುವ ಆಮಿಷ ತೋರಿಸಿ 34 ಲಕ್ಷ ಹಣ ಪೀಕಿದ್ದ.. ಗೋವಾ, ಹುಬ್ಬಳ್ಳಿ, ಬೆಂಗಳೂರು ಸೇರಿ ವಿವಿಧ ಸ್ಥಳಗಳಲ್ಲಿ ರೈತ ಪಕೀರಪ್ಪನಿಂದ ಹಂತ ಹಂತವಾಗಿ ಹಣ ಪಡೆದು ವಂಚಿಸಿದ್ದಾನೆ.