ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಸೈಕೊ ಕಳ್ಳನ ಸಂಚಾರ
ಭಾನುವಾರ, 22 ಜುಲೈ 2018 (15:05 IST)
ರಾತ್ರೋರಾತ್ರಿ ಲೇಡಿಸ್ ಹಾಸ್ಟೆಲ್ ಗೆ ಸೈಕೋ ಕಳ್ಳನೊಬ್ಬ ನುಗ್ಗಿ ದಾಂಧಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೈಕೋನ ಚೆಲ್ಲಾಟ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಪೀಕಲಾಟ ತಂದಿಟ್ಟಿದೆ.
ಮೈಸೂರಿನ ಕೆ ಆರ್ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಸೈಕೋ ಕಳ್ಳನೊಬ್ಬ ನುಗ್ಗಿ ದಾಂಧಲೆ ಮಾಡಿ ಪರಾರಿಯಾಗಿದ್ದಾನೆ.
ಮೂರಂತಸ್ತಿನ ನರ್ಸಿಂಗ್ ಹಾಸ್ಟೆಲ್ ಕಟ್ಟಡ ಏರಿ ಒಳ ನುಗ್ಗಿ ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸಿದ್ದಾನೆ. ವಿದ್ಯಾರ್ಥಿನಿ ರೂಂಗೆ ತಡ ರಾತ್ರಿ ನುಗ್ಗಿ ಮೊಬೈಲ್ ಕಸಿದು ಕೊಂಡ ಸೈಕೋ, ಯುವತಿಯರೊಂದಿಗೆ ಅಸಭ್ಯವಾಗಿಯೂ ವರ್ತಿಸಿದ್ದಾನೆ.
ಸೆಕ್ಯೂರಿಟಿ, ಸಿಸಿಟಿವಿ ಇದ್ದರೂ, ಯಾವುದನ್ನೂ ಲೆಕ್ಕಿಸದೆ ಆಳೆತ್ತರದ ಕಾಂಪೌಂಡ್ ಹಾರಿದ್ದ ಸೈಕೊ, ಕಳೆದ ಬೆಳಗಿನ ಜಾವ ಸುಮಾರು 3 ಗಂಟೆವರೆಗೂ ಹಾಸ್ಟೆಲ್ ಸರೌಂಡಿಂಗ್ ನಲ್ಲಿದ್ದ. ಹಾಸ್ಟೆಲ್ ಒಳ ಭಾಗದಲ್ಲಿ ಒಣಗಿ ಹಾಕಿದ್ದ ಬಟ್ಟೆಗಳನ್ನು ಮೈಗೆ ಉಜ್ಜಿಕೊಂಡು ವಿಕೃತ ಕಾಮುಕನ ತೋರಿದ್ದಾನೆ. ಹೀಗಾಗಿ ಸೈಕೊ ವರ್ತನೆಗೆ ನರ್ಸಿಂಗ್ ವಿದ್ಯಾರ್ಥಿಗಳು ಕಂಗಾಲಾಗುವಂತಾಯಿತು.
ಸುಮಾರು 30 ವರ್ಷ ಇತಿಹಾಸವಿರುವ ಕೆ ಆರ್ ಆಸ್ಪತ್ರೆಯ ನರ್ಸಿಂಗ್ ಹಾಸ್ಟೆಲ್ನ ಹಿಂಭಾಗದಿಂದ ಕಾಂಪೌಂಡ್ ಹಾರಿ ಬಂದಿರುವ ವಿಕೃತ ಕಾಮಿ ಭಯಕ್ಕೆ ಕಾರಣವಾಗಿದ್ದಾನೆ.
ಕಳೆದ ವರ್ಷ ಸಹ ಇದೇ ರೀತಿ ಘಟನೆ ನಡೆದಿತ್ತು. ಪ್ರಕರಣ ದಾಖಲು ಮಾಡಿಕೊಂಡಿರುವ ದೇವರಾಜ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.