ನಟ ದರ್ಶನ್ ಪುಟ್ಟ ಅಭಿಮಾನಿ ಸಾವು

ಶುಕ್ರವಾರ, 8 ಮಾರ್ಚ್ 2019 (18:24 IST)
ನಟ ದರ್ಶನ್ ಅವರ ಪುಟ್ಟ ಅಭಿಮಾನಿ ಸಾವನ್ನಪ್ಪಿದ್ದಾರೆ.

ದರ್ಶನ್ ಅಭಿಮಾನಿ ಪೂರ್ವಿಕಾ(10) ಇಹಲೋಕ ತ್ಯಜಿಸಿದ್ದಾಳೆ. ಹೃದಯ ಸಂಬಂಧಿ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿದ್ದ ಪೂರ್ವಿಕಾ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಪಣ್ಣೆದೊಡ್ಡಿ ಗ್ರಾಮದ ನಿವಾಸಿ ಪೂರ್ವಿಕಾ ಈ ಹಿಂದೆ ನಟ ದರ್ಶನ್ ಅನ್ನು ನೋಡುವ ಇಚ್ಚೆ ವ್ಯಕ್ತಪಡಿಸಿದ್ದಳು.

ಪೂರ್ವಿಕಾಳನ್ನು ಭೇಟಿಯಾಗಿ ಆಸೆ ಈಡೇರಿಸಿದ್ದರು ದರ್ಶನ್. ಈಗ ಅನಾರೋಗ್ಯದಿಂದ ಇಂದು ಪೂರ್ವಿಕಾ ಸಾವನ್ನಪ್ಪಿದ್ದಾಳೆ. ಬೆಸಗರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ