ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ವೈದ್ಯನ ಮೇಲೆ ಮಗ ಇದ್ದಕ್ಕಿದ್ದ ಹಾಗೇ ಮಾಡಿದ್ದೇನು

Sampriya

ಬುಧವಾರ, 13 ನವೆಂಬರ್ 2024 (18:49 IST)
ಪೆರುಂಗಲತ್ತೂರು; ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲವೆಂದು ಕೋಪಗೊಂಡ ಮಗ ವೈದ್ಯನಿಗೆ ಚಾಕುವಿನಿಂದ ಇರಿದು ಗಂಭೀರ ಹಲ್ಲೆ ನಡೆಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಗಂಬೀರವಾಗಿ ಹಲ್ಲೆಗೊಳಗಾದ ವೈದ್ಯರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಪೊಲೀಸರ ಪ್ರಕಾರ ದಾಳಿಕೋರ ವಿಘ್ನೇಶ್ ಮತ್ತು ಆತನ ಸಹಚರರಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

ವಿಘ್ನೇಶ್ ತಾಯಿ ಪ್ರೇಮಾ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.  ಪ್ರೇಮಾ ಸ್ಥಿತಿ ಗಂಭೀರವಾಗಿದ್ದು, ಈ ವಿಚಾರ ಸಲುವಾಗಿ ವೈದ್ಯರ ಜತೆ ವಿಘ್ನೇಶ್ ವಾಗ್ವಾದಕ್ಕೆ ಇಳಿದಿದ್ದಾನೆ.  ಕೆಲ ಕಾಲ ವಾಗ್ವಾದದ ನಂತರ ಕೋಪಗೊಂಡ ವಿಘ್ನೇಶ್ ಚಾಕು ತೆಗೆದು ವೈದ್ಯರ ಕುತ್ತಿಗೆಗೆ ಇರಿದಿದ್ದಾನೆ.

ಅಲ್ಲಿದ್ದ ಜನರು ಕೂಡಲೇ ವೈದ್ಯರಿಗೆ ಸಹಾಯ ಮಾಡಲು ಓಡಿ ಬಂದರು, ಅವರನ್ನು ಐಸಿಯುಗೆ ಕರೆದೊಯ್ದರು. ದಾಳಿಯ ನಂತರ ಆರೋಪಿ ಪರಾರಿಯಾಗಲು ಯತ್ನಿಸಿದ್ದು ಭದ್ರತಾ ಸಿಬ್ಬಂದಿ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ.

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಲೈಂಜರ್ ಸೆಂಟಿನರಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಅಗತ್ಯ ಚಿಕಿತ್ಸೆಗೆ ಆದೇಶಿಸಿದ್ದೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ