ಪ್ರಶ್ನೆ ಮಾಡಿದ್ರೆ ಗುರಾಯಿಸ್ತಾರೆ ಎಂದ ಚಿತ್ರ ನಟ

ಗುರುವಾರ, 25 ಜುಲೈ 2019 (17:57 IST)
ಅನ್ಯಾಯವನ್ನ ಪ್ರಶ್ನೆ ಮಾಡಿದ್ರೆ ನಮ್ಮನ್ನೇ ಗುರಾಯಿಸ್ತಾರೆ. ಪ್ರಶ್ನೆ ಮಾಡಿದ ಕಾರಣದಿಂದಲೇ ನಮಗೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ. ಹೀಗಂತ ಚಿತ್ರನಟ ಹೇಳಿದ್ದಾರೆ.

ಅನ್ಯಾಯದ ವಿರುದ್ಧ ಪ್ರತಿಭಟನೆ, ಹೋರಾಟ ನಡೆಸಿದವರ ವಿರುದ್ಧ ಹಲ್ಲೆ ನಡೆಸುವುದು, ಬಂಧನ ಮಾಡುವುದು ನಡೆಯುತ್ತಿದೆ. ಹೀಗಂತ ಕೋಲಾರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಸೇವಾ ಸಮಿತಿ ಸಮಾರಂಭದಲ್ಲಿ ನಟ ಚೇತನ್ ಹೇಳಿದ್ರು.

ಎಂ.ಎಂ.ಕಲಬುರ್ಗಿಯಂತಹ ಹಿರಿಯ ಸಾಹಿತಿಗಳನ್ನು ಧಾರ್ಮಿಕತೆ ಜೋತುಬಿದ್ದ ವಾದಿಗಳು ಕೊಲೆ ಮಾಡಿದ್ದಾರೆ ಎಂದ ಅವರು, ಅನ್ಯಾಯದ ವಿರುದ್ಧ ಹೋರಾಟ ನಡೆಸುವುದಕ್ಕಾಗಿಯೇ ಸಂವಿಧಾನ ನಮಗೆ ಸಿಕ್ಕಿದೆ ಎಂದರು.

ಟಿಪ್ಪು ಸುಲ್ತಾನ್ ಬಗ್ಗೆ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ. ಟಿಪ್ಪು ಬಗ್ಗೆ ವಿನಾಕಾರಣ ವಿವಾದ ಉಂಟು ಮಾಡೋರಿಗೆ ರಾಜ್ಯದ ಇತಿಹಾಸ ಗೊತ್ತಿಲ್ಲ ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ