ಖತರ್ನಾಕ್ ಕಳ್ಳರು ಪೊಲೀಸ್ ಬಲೆಗೆ

ಶನಿವಾರ, 16 ಏಪ್ರಿಲ್ 2022 (16:54 IST)
ಊಬರ್ ಕ್ಯಾಬ್ ಬುಕ್ ಮಾಡಿ ಚಾಲಕನನ್ನ ಕರೆಸಿಕೊಂಡು ಡಿಫ್ರೆಂಟಾಗಿ ಸುಲಿಗೆ ಮಾಡಿದ್ದ ಆರೋಪಿಗಳನ್ನ ಸಂಪಿಗೆಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಬ್ ಬುಕ್ ಮಾಡಿ ಚಾಲಕನಿಗೆ ಮಾರಕಾಸ್ತ್ರಗಳನ್ನ ತೋರಿಸಿ ಆರೋಪಿಗಳು ಹಣ, ಮೊಬೈಲ್  ಕಿತ್ತುಕೊಂಡಿದ್ರು. ಸದ್ಯ ಪ್ರಕರಣವನ್ನ ಭೇದಿಸಿರೋ  ಪೊಲೀಸರು ಹೃತಿಕ್ ಗೌಡ , ನಿತಿನ್ ಗೌಡ,  ಸುಮಂತ್ , ದರ್ಶನ್  ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು , ಬಂಧಿತರಿಂದ 5ಲಕ್ಷ ಮೌಲ್ಯದ ಕಾರು, ಒಂದು ಬೈಕ್, ಒಂದು ಮೊಬೈಲ್ ಹಾಗೂ 18 ಗ್ರಾಂ ಚಿನ್ನಾಭರಣವನ್ನ ಜಪ್ತಿಮಾಡಲಾಗಿದೆ. ಇನ್ನು ಬಂಧಿತ ಆರೋಪಿಗಳು  ಬೆಳ್ಳಂದೂರು, ಹನುಮಂತ ನಗರ, ಹಾಸನದ ಕೊಣನೂರು ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿರೋ ಬಗ್ಗೆ ತನಿಖೆ ಸಂದರ್ಭದಲ್ಲಿ ತಿಳಿಸುಬಂದಿದೆ..ಸದ್ಯ ಸಂಪಿಗೇಹಳ್ಳಿ ಪೊಲೀಸ್ರು ಆರೋಪಿಗಳನ್ನ ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ