ಹೋಮ್ ಕ್ವಾರಂಟೈನ್ ಬಿಟ್ಟು ಹೊರ ಬಂದರೆ ಜೈಲಿಗೆ ತಳ್ಳೋದು ಫಿಕ್ಸ್.
ಭಟ್ಕಳದಲ್ಲಿ ಕರೋನಾ ಸೋಂಕು ಹರಡದಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಪೊಲೀಸ್ ಇಲಾಖೆಯೊಂದಿಗೆ ಸೇರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಪಶ್ವಿಮವಲಯ ಡಿಐಜಿ ದೇವಜ್ಯೋತಿ ರಾಯ್ ಹೇಳಿದ್ದಾರೆ.
ಭಟ್ಕಳದಲ್ಲಿ ಪೊಲೀಸ್ ಬಂದೋಬಸ್ತ್ ಬಗ್ಗೆ ಪರಿಶೀಲನೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದವರು ತಮ್ಮ ಮಾಹಿತಿಯನ್ನು ಕಡ್ಡಾಯವಾಗಿ ತಾಲೂಕು ಆಡಳಿತಕ್ಕೆ ತಿಳಿಸಬೇಕು. ಅಲ್ಲದೇ ಅವರು ಹೋಮ್ ಕ್ವಾರಂಟೈನ್ ನಲ್ಲಿದ್ದು ಸಹಕರಿಸಬೇಕು. ಒಂದೊಮ್ಮೆ ಅನಗತ್ಯವಾಗಿ ಸಾರ್ವಜನಿಕರ ಸಂಪರ್ಕ ಬಂದರೆ ಅಂಥವನ್ನು ಜೈಲಿಗೆ ತಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕಲು ಬಂದಾಗ ಅವರಿಗೆ ಅವಶ್ಯಕ ಮಾಹಿತಿಯನ್ನು ನೀಡಬೇಕು. ಒಂದೊಮ್ಮೆ ಮಾಹಿತಿ ನೀಡಲು ನಿರಾಕರಿಸಿದರೆ ಅಥವಾ ಆಶಾ ಕಾರ್ಯಕರ್ತರೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಅಂಥವರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.