ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರ ಕ್ಯೂ

ಭಾನುವಾರ, 30 ಜುಲೈ 2023 (15:50 IST)
ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಹಿನ್ನಲೆ ವಿಕೆಂಡ್ ಹಾಗೂ ಮೋಹರಂ ಸರ್ಕಾರಿ ರಜಾ ದಿನ ಇರುವುದರಿಂದ ಗೃಹಲಕ್ಷ್ಮಿ ನೋಂದಣಿಗೆ ಮಹಿಳೆಯರು ಫುಲ್ ಕ್ಯೂ ನಿಂತಿದ್ದಾರೆ.ರಾಜಾಜಿನಗರ ಬೆಂಗಳೂರು ಒನ್ ನಲ್ಲಿ ಜನವೋ ಜನ ಇದ್ದಾರೆ.ಬೆಳಗ್ಗೆ ಯಿಂದ ಜನ ಕ್ಯೂ ನಲ್ಲಿ ನಿಂತಿದ್ದಾರೆ.ಹೆಚ್ಚಿನ ಜನ ನೋಂದಣಿಗೆ ಆಗಮಿಸುತ್ತಿದ್ದು,ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಭಾನುವಾರವೂ ಅರ್ಜಿ ನೋಂದಣಿ ಪ್ರಕ್ರಿಯೆ ಮುಂದುವರೆದಿದೆ.ರಾಜಾಜಿನಗರದ ಬೆಂಗಳೂರು ಒನ್ ಸೆಂಟರ್ ಗೆ ಜನ ಬರ್ತಿದ್ದು.ಭಾನುವಾರ ಅರ್ಜಿ ಸಲ್ಲಿಕೆಗೆ ಅವಕಾಶ ಇರಲ್ಲ ಎಂಬ ಗೊಂದಲದಲ್ಲಿ ಜನ ಇದ್ದಾರೆ. ಆದ್ರು ಇಂದು‌ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶ ಇರೋದ್ರೊಂದ ಅರ್ಜಿ ನೋಂದಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ