ಕಾಂಗ್ರೆಸ್ ನಲ್ಲಿ ಮತ್ತೆ ಮೂಲ-ವಲಸಿಗರ ನಡುವೆ ಗುದ್ದಾಟ

ಬುಧವಾರ, 6 ನವೆಂಬರ್ 2019 (11:16 IST)
ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಮೂಲ ಕಾಂಗ್ರೆಸಿಗರು ಹಾಗೂ ವಲಸೆ ಕಾಂಗ್ರೆಸಿಗರ ನಡುವೆ ಗುದ್ದಾಟ ಶುರುವಾಗಿದ್ದು, ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಮೂಲ ಕಾಂಗ್ರೆಸಿಗರು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.




ರಾಜ್ಯ ರಾಜಕೀಯದ ಬಗ್ಗೆ ಅಹ್ಮದ್ ಪಟೇಲ್ ಗೆ ಬಿ.ಕೆ. ಹರಿಪ್ರಸಾದ್ ಮಾಹಿತಿ ನೀಡಿದ್ದು, ಸತತ 13 ವರ್ಷಗಳಿಂದ ಅಧಿಕಾರ ಅನುಭವಿಸುತ್ತಲೇ ಇದ್ದಾರೆ. ಆದರೆ ಚುನಾವಣೆ ಸೋಲಿಗೆ ಮಾತ್ರ ಹೊಣೆ ಹೊತ್ತುಕೊಳ್ಳುತ್ತಿಲ್ಲ ಎಂದು ಹರಿಪ್ರಸಾದ್ ಬಣದವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.


ಬಿಬಿಎಂಪಿ ಚುನಾವಣೆ ಸೋಲು, ವಿಧಾನಸಭಾ ಚುನಾವಣೆ ಸೋಲು, ಲೋಕಸಭಾ ಚುನಾವಣೆ ಸೋಲಿಗೆ ಹೊಣೆ ಯಾರು? ಎಂದು  ಪ್ರಶ್ನಿಸಿರುವ ಬಿಕೆ ಹರಿಪ್ರಸಾದ್, ಉಪಚುನಾವಣೆ ಹೊಣೆಯನ್ನು ಸಿದ್ದರಾಮಯ್ಯಗೇ ನೀಡಿ ಎಂದು ಹಿರಿಯ ನಾಯಕ ಅಹ್ಮದ್ ಪಟೇಲ್ ಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ