ಮನೆಯಲ್ಲಿಯೇ ಮಿಕ್ಸಿ ಜಾರ್, ಚಾಕು , ಕತ್ತರಿಗಳನ್ನು ಚೂಪಾಗಿಸುವುದು ಹೇಗೆ ಗೊತ್ತಾ?

ಬುಧವಾರ, 6 ನವೆಂಬರ್ 2019 (09:18 IST)
ಬೆಂಗಳೂರು : ಎಲ್ಲರ ಮನೆಯಲ್ಲಿಯೂ ಮಿಕ್ಸಿ ಜಾರ್, ಚಾಕು , ಕತ್ತರಿಗಳನ್ನು  ಉಪಯೋಗಿಸುತ್ತೇವೆ. ಆದರೆ ಇದು ಬಳಸುತ್ತಾ ಮೊಂಡಾಗುತ್ತದೆ. ಆಗ ಅದು ಉಪಯೋಗಕ್ಕೆ ಬಾರದು ಎಂದು ಎಸೆಯುವ ಬದಲು ಮನೆಯಲ್ಲಿಯೇ ಅದನ್ನು ಚೂಪಾಗಿಸಬಹುದು.




ಮಿಕ್ಸಿ ಜಾರ್ ಚೂಪಾಗಿರಬೇಕು ಅಂದರೆ ಅದಕ್ಕೆ 1 ಕಪ್ ಕಲ್ಲುಪ್ಪನ್ನು ಹಾಕಿ ಗ್ರೈಂಡ್ ಮಾಡಿ. ಇದರಿಂದ ಮಿಕ್ಸಿ ಜಾರ್ ಚೂಪಾಗಿರುತ್ತದೆ.


ಹಾಗೇ ಚಾಕು, ಕತ್ತರಿ ಹರಿತವಾಗಿರಬೇಕೆಂದರೆ ಉಪ್ಪಿನ ಕಾಗದ(ಸ್ಯಾಂಡ್ ಪೇಪರ್)ನಿಂದ ಅದನ್ನು ಉಜ್ಜಬೇಕು. ಹೀಗೆ 5-10 ನಿಮಿಷ ಉಜ್ಜಬೇಕು, ಅಥವಾ ಆ ಪೇಪರ್ ನ್ನು ಕಟ್ ಮಾಡುವುದರಿಂದ ಅದು ಬೇಗ ಹರಿತವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ