ಭಾರತಕ್ಕೆ ಬಂದ ಹೈಟೆಕ್ ಯುದ್ಧವಿಮಾನ ರಫೇಲ್ : ಪಾಕಿಸ್ತಾನಕ್ಕೆ ಬಿಗ್ ಶಾಕ್

ಮಂಗಳವಾರ, 8 ಅಕ್ಟೋಬರ್ 2019 (14:41 IST)
ನೆರೆಯ ಪಾಕಿಸ್ತಾನ ಗಡಿಯಲ್ಲಿ ತಂಟೆ ಮುಂದುವರಿಸುತ್ತಿರುವಂತೆ ಭಾರತಕ್ಕೆ ಅತ್ಯಾಧುನಿಕ ಯುದ್ಧ ವಿಮಾನ ಬಂದಿಳಿದಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೊದಲ ಅತ್ಯಾಧುನಿಕ ರಫೇಲ್ ಯುದ್ಧವಿಮಾನವನ್ನು ಪ್ಯಾರೀಸ್ ನಲ್ಲಿ ಸ್ವೀಕರಿಸಿದ್ದಾರೆ.

ಫ್ರಾನ್ಸ್ ಹಾಗೂ ಭಾರತ ನಡುವೆ ಒಟ್ಟು 36 ರಫೇಲ್ ಯುದ್ಧ ವಿಮಾನಗಳ ಕುರಿತು ಒಪ್ಪಂದ ಆಗಿದೆ. ಮೊದಲ ವಿಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವೀಕಾರ ಮಾಡಿದ್ದಾರೆ.

ರಫೇಲ್ ಯುದ್ಧ ವಿಮಾನ ಭಾರತದ ಸೈನಿಕರಿಗೆ ಆನೆ ಬಲ ತಂದು ಕೊಡಲಿದೆ. ಪಾಪಿ ಪಾಕಿಸ್ತಾನಕ್ಕೆ ಭಾರತ ರಫೇಲ್ ಖರೀದಿ ಮೂಲಕ ಭಾರೀ ಹೊಡೆತ ನೀಡಿದೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ