ರಾಫೆಲ್ ಯುದ್ಧವಿಮಾನ ಇಂದು ವಾಯುಪಡೆಗೆ ಸೇರ್ಪಡೆ

ಮಂಗಳವಾರ, 8 ಅಕ್ಟೋಬರ್ 2019 (09:32 IST)
ನವದೆಹಲಿ: ಫ್ರಾನ್ಸ್ ಸಹಯೋಗದೊಂದಿಗೆ ನಿರ್ಮಿತವಾದ ಸುಧಾರಿತ ರಾಫೇಲ್ ಯುದ್ಧವಿಮಾನ ಇಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ.


ಮೊದಲ ಯುದ್ಧವಿಮಾನವನ್ನು ಸ್ವತಃ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಬರಮಾಡಿಕೊಳ್ಳಲಿದ್ದಾರೆ. ಈ ಕ್ಷಣಕ್ಕೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದೇವೆ ಎಂದು ರಾಜ್ ನಾಥ್ ಸಿಂಗ್ ಹೇಳಿಕೊಂಡಿದ್ದಾರೆ.

ರಾಫೆಲ್ ಯುದ್ಧವಿಮಾನ ಖರೀದಿ ವಿಚಾರದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಆದರೆ ಇದು ಸುಳ್ಳು ಎಂದು ಕೇಂದ್ರ ಪ್ರತಿಪಾದಿಸುತ್ತಲೇ ಇತ್ತು. ಇದೀಗ ಸುಧಾರಿತ ರಾಫೆಲ್ ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ