ರಾಹುಲ್ ಗಾಂಧಿ ಖಾತೆ ಕೆಲಕಾಲ ಅಮಾನತು!

ಭಾನುವಾರ, 8 ಆಗಸ್ಟ್ 2021 (09:51 IST)
ನವದೆಹಲಿ(ಆ.08): ಶುಕ್ರವಾರ ವಿವಾದಿತ ಫೋಟೋ ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಧಿಕೃತ ಟ್ವೀಟರ್ ಖಾತೆಯನ್ನು ಟ್ವೀಟರ್ ಸಂಸ್ಥೆ ಶನಿವಾರ ಕೆಲ ಹೊತ್ತು ಅಮಾನತು ಮಾಡಿತ್ತು.

ಬಳಿಕ ರಾಹುಲ್ ಖಾತೆ ಸಕ್ರಿಯಗೊಳಿಸಲಾಗಿದೆ. ಆದರೆ ರಾಹುಲ್ ಮಾಡಿದ್ದ ವಿವಾದಾತ್ಮಕ ಫೋಟೋ ಟ್ವೀಟ್ ಅನ್ನು ಅಳಿಸಿ ಹಾಕಿದೆ. ದಿಲ್ಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾಗಿದ್ದ 9 ವರ್ಷದ ಬಾಲಕಿ ಕುಟುಂಬವನ್ನು ಭೇಟಿ ಮಾಡಿದ್ದ ರಾಹುಲ್, ಆ ಕುಟುಂಬದ ಫೋಟೋವನ್ನು ಟ್ವೀಟ್ ಮಾಡಿದ್ದರು.
ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಫೋಟೋ ಟ್ವೀಟ್ ಮಾಡುವುದು ನಿಯಮದ ವಿರುದ್ಧದ ಕಾರಣಕ್ಕೆ ರಾಹುಲ್ರ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ