ಮಾ.9ಕ್ಕೆ ಹಾವೇರಿಗೆ ರಾಹುಲ್ ಗಾಂಧಿ

ಸೋಮವಾರ, 25 ಫೆಬ್ರವರಿ 2019 (17:39 IST)
ಮಾರ್ಚ್ 9 ರಂದು ಹಾವೇರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ದಲಿತರಿಗೆ ಪಕ್ಷದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹೀಗಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಹೇಳಿದ್ದಾರೆ.

ಮಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ  ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ.  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಸೀಟು ಹಂಚಿಕೆ  ಸಂಬಂಧಿಸಿದಂತೆ ವಾರದೊಳಗೆ ಸಂಪೂರ್ಣ ಚಿತ್ರಣ ಹೊರಬರಲಿದೆ. ಈಗಾಗಲೇ ಪ್ರಾಥಮಿಕ ಹಂತದಲ್ಲಿ ಸಭೆ ನಡೆದಿದೆ ಎಂದರು.  

ಸೀಟು ಹಂಚಿಕೆ ಕುರಿತು ಇನ್ನೊಂದು ಸುತ್ತಿನ ಸಭೆ ನಡೆಯಲಿದೆ. ಆ ಬಳಿಕ ದೆಹಲಿ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಡಾ.ಜಿ.ಪರಮೇಶ್ವರ ಅವರೇ ಸರಕಾರದಲ್ಲಿ ಪ್ರಮುಖರಾಗಿದ್ದಾರೆ. ಅವರೇ ನಮ್ಮ ನಾಯಕರಾಗಿದ್ದಾರೆ ಎಂದ ಅವರು, ದಲಿತರಿಗೆ  ಕಾಂಗ್ರೆಸ್ ಪಕ್ಷ ಹೆಚ್ಚಿನ ಪ್ರಾಮುಖ್ಯತೆ  ನೀಡಿದೆ ಎಂದು ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ