8 ಸಾವಿರ ಎಕರೆ ಭಸ್ಮ; ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡ್ತೇವೆ ಎಂದವರಾರು?
ಸೋಮವಾರ, 25 ಫೆಬ್ರವರಿ 2019 (16:54 IST)
ಬಂಡೀಪುರದಲ್ಲಿ ನಡೆದ ಕಾಡ್ಗಿಚ್ಚು ಅತ್ಯಂತ ಬೇಸರ ಉಂಟಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.
ಸುಮಾರು 8 ಸಾವಿರ ಎಕರೆ ಪ್ರದೇಶದುದ್ದಕ್ಕೂ ಬೆಂಕಿಕೆನ್ನಾಲಿಗೆ ಆವರಿಸಿ, ಇಡೀ ಅರಣ್ಯ ಸುಟ್ಟು ಹೋಗಿದೆ. ಇದರ ಹಿಂದೆ ಯಾರದ್ದೇ ಕೈವಾಡ ಇದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಲ್ಲಿನ ಸಂಪೂರ್ಣ ಪರಿಸರ ಹಾಳಾಗಿದೆ. ಸಾಕಷ್ಟು ಪ್ರಾಣಿಗಳು ಜೀವ ಕಳೆದುಕೊಂಡಿದೆ. ಅರಣ್ಯ ಇಲಾಖೆ ಈ ಭಾಗಕ್ಕೆನೀರು ಹಾಕುವ ಕೆಲಸ ಮಾಡುತ್ತಿದೆ ಎಂದರು.
ಲೋಕಸಭೆ ಚುನಾವಣೆ ಸೀಟುಗೆ ಹಂಚಿಕೆ ವಿಚಾರವಾಗಿ ಇಂದು ಜೆಡಿಎಸ್‌ನ ಇಬ್ಬರು ನಾಯಕರೊಂದಿಗೆ ನಾನು ಹಾಗೂ ದಿನೇಶ್ ಗುಂಡೂರಾವ್ ಸಭೆ ನಡೆಸಲಿದ್ದೇವೆ. ಸಭೆ ಬಳಿಕ ತೀರ್ಮಾನ ಮಾಡಲಾಗುವುದು ಎಂದರು.
ಕ್ಯಾಬಿನೆಟ್ ಇದ್ದ ದಿನ ಒಬ್ಬ ಸಚಿವರು ತಿಂಡಿ ಅಥವಾ ಕಾಫಿಗೆ ಕರೆಯುವ ಪದ್ಧತಿ ಮಾಡಿಕೊಂಡಿದ್ದೇವೆ. ಕ್ಯಾಬಿನೆಟ್‌ಗೆ ಹೋಗುವ ಮುನ್ನ ಈ ಬಗ್ಗೆ ಚರ್ಚೆ ಮಾಡಲು ಈ ಪದ್ಧತಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣ ಭೈರೇಗೌಡ ಅವರು ತಿಂಡಿಗೆ ಆಹ್ವಾನಿಸಿದ್ದರು ಎಂದು ಹೇಳಿದರು.