ಶ್ರೀಗಂಧ ಮಂಡಳಿ ರಚನೆ ಸಂಬಂಧ ಕ್ರಮ ಎಂದ ಡಿಸಿಎಂ

ಸೋಮವಾರ, 25 ಫೆಬ್ರವರಿ 2019 (14:12 IST)
ಕರ್ನಾಟಕ ಶ್ರೀಗಂಧ ಮಂಡಳಿ ರಚನೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.  

ಸ್ಯಾಂಡಲ್‌ವುಡ್‌ ಸೊಸೈಟಿ ಆಫ್ ಇಂಡಿಯಾ ವತಿಯಿಂದ ಜೆ.ಎನ್. ಟಾಟಾ ಆಡಿಟೋರಿಯಂ‌ನಲ್ಲಿ ಆಯೋಜಿಸಿದ್ದ "ಶ್ರೀ ಗಂಧದ ಪ್ರಸ್ತುತ ಸ್ಥಿತಿ ಮತ್ತು ‌ಭವಿಷ್ಯದ ಪ್ರಾಮುಖ್ಯತೆ" ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ, ಅರಣ್ಯ ಇಲಾಖೆಯು ಮಂಡಳಿ ರಚನೆ‌ ಸಂಬಂಧ ವರದಿ ನೀಡುವಂತೆ ಸೂಚನೆ‌ನೀಡಲಾಗಿದೆ. ವರದಿ ಬಳಿಕ ಶ್ರೀಗಂಧ ಮಂಡಳಿ ರಚನೆ ಮಾಡಲಾಗುವುದು ಎಂದರು. ಕೃಷಿ, ಅರಣ್ಯ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶ್ರೀಗಂಧದ
ಹೊಸ ತಳಿ‌ಗಳನ್ನು ಸಂಶೋಧನೆ ಮಾಡುವ ಅಗತ್ಯವಿದೆ. ಈ ಮೂಲಕ ಶ್ರೀಗಂಧ ಗಿಡಗಳನ್ನು ಬೆಳೆಸಬೇಕು ಎಂದರು.

ಶ್ರೀಗಂಧ ಬೆಳೆಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಶ್ರೀಗಂಧಕ್ಕೂ 100 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ