ರಾಯಚೂರು ಮೂಲದ ರಾಜ್ಯ ಸರ್ಕಾರಿ ನೌಕರನ ಶವ ನಗರದ ಲಾಡ್ಜ್ ನಲ್ಲಿ ಪತ್ತೆ

ಮಂಗಳವಾರ, 31 ಆಗಸ್ಟ್ 2021 (20:00 IST)
ಬೆಂಗಳೂರು: ರಾಜಧಾನಿಯ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದುಸ್ತಾನ್ ಲಾಡ್ಜ್ ನಲ್ಲಿ ವ್ಯಕ್ತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ರಾಯಚೂರು ಮೂಲದ ಪ್ರಕಾಶ್ ಬಾಬು ಸಾವನೊಪ್ಪಿದ ವ್ಯಕ್ತಿಯಾಗಿದ್ದಾನೆ. 
 
ಎಫ್ ಡಿ ಎ (ಪ್ರಥಮ ದರ್ಜೆಯ ಸಹಾಯಕ) ನಾಗಿ ರಾಯಚೂರಿನ ಜಿಲ್ಲೆಯ ಎಸಿ (ಸಹಾಯಕ ಆಯುಕ್ತ) ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಪ್ರಕಾಶ್  
ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದರು. 
 
ಆಗಸ್ಟ್ 27 ರ ಸಂಜೆ ಬೆಂಗಳೂರಿಗೆ ಬಂದಿದ್ದವರ ವಿರುದ್ಧ ರಾಯಚೂರಿನಲ್ಲಿ ಹಣಕಾಸು ವ್ಯವಹಾರದಲ್ಲಿ ವಂಚನೆ ಆರೋಪ ಕೇಳಿಬಂದಿತ್ತು. ಕಲೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಸೂಚಿಸಿ ಇಲಾಖೆಯಿಂದ ಅಂತರಿಕ ತನಿಖೆ ನಡೆಸುವ ಸೂಚನೆಯನ್ನು. 
 
ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 
 
ಕಾಣೆಯಾಗಿದ್ದ ಪ್ರಕಾಶ್ ಬಾಬು: 
 
ರಾಯಚೂರಿನ ಪ್ರಥಮ ದರ್ಜೆ ಸಹಾಯಕರಿಗಿ ಕೆಲಸ ನಿರ್ವಹಿಸುತ್ತಿರುವ ಪ್ರಕಾಶ್ ಬಾಬು ವಿರುದ್ಧ ಲೆಕ್ಕ ಪರಿಶೋಧಕರ ವರದಿಯಲ್ಲಿ ಅವ್ಯವಹಾರ ನೆಡೆಸಿರುವುದು ಬೆಳಕಿಗೆ ಬಂದಿತ್ತು.ಪ್ರಕಾಶ್ ಮನೆ ರಾಯಚೂರು ನಗರದ ಅಸ್ಪುರ್ ರಸ್ತೆಯಲ್ಲಿದ್ದು ಕುಟುಂಬಸ್ಥರು ರಾಯಚೂರು ಪಶ್ಚಿಮ ವಿಭಾಗದ ಪೊಲೀಸರಿಗೆ ಒಂದು ವಾರದ ಹಿಂದೆ ದೂರು ದಾಖಲಾಗಿದೆ. ಹಲವಾರು ರಾಯಚೂರು ಸಮಸ್ಯೆಗಳು, ಹಲವು ಜಿಲ್ಲೆಗಳು ಮತ್ತು ಪಕ್ಕದ ರಾಜ್ಯಗಳಲ್ಲಿ ಸಹ ಹುಡುಕಾಟ ನೆಡೆಸಿದ್ದರು. ಆದರೆ ಇಂದು ರಾಜಧಾನಿಯ ಗಾಂಧಿನಗರದ 6 ನೆಯ ಮುಖ್ಯರಸ್ತೆಯಲ್ಲಿರುವ ಹೋಟೆಲ್ ಹಿಂದುಸ್ಥಾನದಲ್ಲಿ ಶವ ಪತ್ತೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ