ನ್ಯಾಯಾಲಯದ 6ನೇ ಮಹಡಿಯಿಂದ ಹಾರಿ ಆರೋಪಿ ಆತ್ಮಹತ್ಯೆ

ಮಂಗಳವಾರ, 31 ಆಗಸ್ಟ್ 2021 (18:23 IST)

ನ್ಯಾಯಾಲಯದ ಆರನೇ ಮಹಡಿಯಿಂದ ಹಾರಿ ಪೋಕ್ಸೋ ಆರೋಪಿತ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ.
ರವಿರಾಜ್ (31), ಆತ್ಮಹತ್ಯೆ ಮಾಡಿಕೊಂಡ ಯುವಕ. ಆಗಸ್ಟ್ 30ರಂದು ಪೋಕ್ಸೋ ಪ್ರಕರಣದಡಿ ರವಿರಾಜ್ ಬಂಧಿತನಾಗಿದ್ದ. ಕುಡಿದ ಮತ್ತಿನಲ್ಲಿ ತೊಕ್ಕೊಟ್ಟುವಿನಲ್ಲಿ ಈತ ಅಪ್ರಾಪ್ತಗೆ ಲೈಂಗಿಕ ಕಿರುಕುಳ ನೀಡಿದ್ದ.
 

ರವಿರಾಜ್ ನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದರು. ಇಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಕೋರ್ಟ್ ನ ಆರನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ